ಏಪ್ರಿಲ್‌ 17 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವುದಿಲ್ಲ: ಸಿ.ಶಿಖಾ

ಸೋಮವಾರ, ಏಪ್ರಿಲ್ 22, 2019
33 °C

ಏಪ್ರಿಲ್‌ 17 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವುದಿಲ್ಲ: ಸಿ.ಶಿಖಾ

Published:
Updated:

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್‌ 17 ಕ್ಕೆ ಪ್ರಕಟ ಆಗುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

ಕೆಲವು ಮಾಧ್ಯಮಗಳಲ್ಲಿ ಏಪ್ರಿಲ್‌ 17 ಕ್ಕೆ ಫಲಿತಾಂಶ ಎಂದು ಬಂದಿರುವ ವರದಿ ಸತ್ಯಕ್ಕೆ ದೂರ ಎಂದು ಪ್ರಜಾವಾಣಿಗೆ ತಿಳಿಸಿದ್ದಾರೆ.

ಮೌಲ್ಯ ಮಾಪನದ ಬಳಿಕೆ ಅಂಕಗಳನ್ನು ಆನ್ ಲೈನ್ ಮೂಲಕ ಸರ್ವರ್ ಗೆ ಸೇರಿಸುವ ಕ್ರಮದಿಂದ ಈ ಬಾರಿ ಫಲಿತಾಂಶ ಬೇಗ ನೀಡಲು ಸಾಧ್ಯವಿದೆ. ಫಲಿತಾಂಶದ ದಿನಾಂಕವನ್ನು ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದರು.

ಸಾಮಾನ್ಯವಾಗಿ ಸಿಇಟಿ ಫಲಿತಾಂಶ ಬಂದ ಬಳಿಕವೇ ಪಿಯುಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಪಿಯು ಪರೀಕ್ಷೆ ಫಲಿತಾಂಶದ ಒತ್ತಡ ವಿದ್ಯಾರ್ಥಿಗಳ ಮೇಲೆ ಆಗಬಾರದು ಎಂಬ ಕಾರಣಕ್ಕೆ ಪರಸ್ಪರ ಹೊಂದಾಣಿಕೆ ಮೇಲೆ ಹಲವು ವರ್ಷಗಳಿಂದ ಈ ವಿಧಾನ ಅನುಸರಿಸಿಕೊಂಡು ಬರಲಾಗಿದೆ ಎಂದು ಸಿಇಟಿ ಮೂಲಗಳು ಹೇಳಿವೆ.

Tags: 

ಬರಹ ಇಷ್ಟವಾಯಿತೆ?

 • 32

  Happy
 • 7

  Amused
 • 3

  Sad
 • 2

  Frustrated
 • 10

  Angry

Comments:

0 comments

Write the first review for this !