ಭಾನುವಾರ, ನವೆಂಬರ್ 17, 2019
21 °C

ತಮಿಳು ನಿರ್ದೇಶಕರೊಂದಿಗೆ ಶಾರುಕ್‌ ಸಿನಿಮಾ

Published:
Updated:

ನವೆಂಬರ್‌ 2ರಂದು ಶಾರುಕ್‌ ಖಾನ್ ಹುಟ್ಟುಹಬ್ಬ. ಒಂದು ವರ್ಷದಿಂದ ಯಾವುದೇ ಸ್ಕ್ರಿಪ್ಟ್‌ ಒಪ್ಪಿಕೊಳ್ಳದ ಬಾಲಿವುಡ್‌ ನಟ, ತಮ್ಮ ಜನ್ಮದಿನದಂದು ಹೊಸ ಸಿನಿಮಾ ಘೋಷಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹಬ್ಬಿದೆ.

ಬಿಡುವಿನಲ್ಲಿ ಹತ್ತಾರು ಸ್ಕ್ರಿಪ್ಟ್‌ಗಳನ್ನು ಓದಿರುವ ಶಾರುಕ್‌, ಈಗ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ತಮಿಳಿನಲ್ಲಿ ‘ಮರ್ಸೆಲ್‌', ಹಾಗೂ ‘ಥೇರಿ’  ಸಿನಿಮಾಗಳನ್ನು ನಿರ್ದೇಶಿಸಿದ್ದ ಅಟ್ಲೀ ಅವರೊಂದಿಗೆ ಸಿನಿಮಾ ಮಾಡಲು ಶಾರುಕ್‌ ನಿರ್ಧರಿಸಿದ್ದಾರೆ.

ಆನಂದ್ ಎಲ್‌.ರೈ ಅವರೊಂದಿಗೆ ಈ ಹಿಂದೆ ‘ಜೀರೊ’ ಸಿನಿಮಾದಲ್ಲಿ ಶಾರುಕ್‌ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಆ ಬಳಿಕ ದೀರ್ಘಕಾಲದ ಬ್ರೇಕ್ ಪಡೆದುಕೊಂಡಿದ್ದ ಶಾರುಕ್‌, ಕುಟುಂಬದೊಂದಿಗೆ ಕಾಲಕಳೆಯುತ್ತಿರುವುದಾಗಿ ಹೇಳಿಕೊಂಡಿದ್ದರು. 2018ರ ಡಿಸೆಂಬರ್‌ನಲ್ಲಿ ‘ಜೀರೊ’ ಬಿಡುಗಡೆಯಾಗಿತ್ತು. 2019ರ ಡಿಸೆಂಬರ್‌ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ ಎಂದು ಶಾರುಕ್‌ ಹೇಳಿದ್ದಾರೆ.

ಇದನ್ನೂ ಓದಿ: ಮತ್ತೊಮ್ಮೆ ಶಾರುಕ್ ಜೊತೆ ನಟಿಸಬಹುದು-ಬಾಲಿವುಡ್ ನಟಿ ಕಾಜಲ್

ಪ್ರತಿಕ್ರಿಯಿಸಿ (+)