ಶನಿವಾರ, ಡಿಸೆಂಬರ್ 14, 2019
25 °C

ಸರ್ವ ಶರಣರ ಸಮ್ಮೇಳನ ಫೆ.16ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಅಸಂಖ್ಯ ಪ್ರಮಥ ಗಣಮೇಳ’ ಎಂಬ ಸರ್ವ ಶರಣರ ಸಮ್ಮೇಳನವನ್ನು ಬೆಂಗಳೂರಿನ ನಂದಿ ಮೈದಾನದಲ್ಲಿ ಫೆ.16ರಂದು ಹಮ್ಮಿಕೊಳ್ಳಲಾಗಿದೆ’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘12ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಈ ಸಮ್ಮೇಳನ ನಡೆದಿತ್ತು. 21ನೇ ಶತಮಾನ ಕೂಡ ಚಾರಿತ್ರಿಕ ಘಟನೆಗೆ ಸಾಕ್ಷಿಯಾಗಲು ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ದೇಶದ ವಿವಿಧ ರಾಜ್ಯಗಳ ಸಂತರು, ಶರಣರು ಹಾಗೂ ಸರ್ವ ಜನಾಂಗದ ಮಠಾಧೀಶರು ಮ್ಮೇಳನದಲ್ಲಿ  ಪಾಲ್ಗೊಳ್ಳಲಿದ್ದಾರೆ’ಎಂದರು.

‘ಸಮ್ಮೇಳನಕ್ಕೆ ಮಠಾಧೀಶರು, ಭಕ್ತರು ಸೇರಿ ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಬೆಳಿಗ್ಗೆ 8ಕ್ಕೆ ಶಿವಯೋಗ ಹಾಗೂ
ಧ್ಯಾನದ ಮೂಲಕ ಸಮ್ಮೇಳನ ಆರಂಭವಾಗಲಿದೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು