ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ವಿಳಂಬ-ತುಂಗಾ ಅಣೆಕಟ್ಟೆಯಲ್ಲಿ ತಳಮಟ್ಟ ತಲುಪಿದ ನೀರು

Last Updated 1 ಜೂನ್ 2019, 2:51 IST
ಅಕ್ಷರ ಗಾತ್ರ

ಶಿವಮೊಗ್ಗ: ಮುಂಗಾರು ಮಳೆ ತಡವಾಗಿರುವ ಕಾರಣ ತುಂಗಾ ಅಣೆಕಟ್ಟಿನಲ್ಲಿ ನೀರು ಸಂಗ್ರಹ ತಳಮಟ್ಟ ತಲುಪಿದ್ದುಕುಡಿಯುವ ನೀರಿಗಾಗಿ ತೀವ್ರ ಅಭಾವ ತಲೆದೋರಿದೆ.

ಶಿವಮೊಗ್ಗ ನಗರಕ್ಕೆ ಅಗತ್ಯವಿರುವ ನೀರು ಪೂರೈಕೆಗಾಗಿಅಧಿಕಾರಿಗಳು ಖಾಸಗಿ ಟ್ಯಾಂಕರ್‌‌ಗಳ ಮೊರೆಹೋಗಿದ್ದಾರೆ. ತುಂಗಾ ಅಣೆಕಟ್ಟಿನಲ್ಲಿರುವ ಡೆಡ್ ಸ್ಟೋರೇಜ್ ನೀರನ್ನೇ ಕುಡಿಯುವ ಸಲುವಾಗಿ ಬಳಸಲಾಗುತ್ತಿದೆ. ಈ ನೀರನ್ನು ಬೇರೆ ಯಾವ ಉದ್ದೇಶಕ್ಕೂ ಬಳಸಲು ಸದ್ಯಕ್ಕೆ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಂಗಾರು ತಡವಾಗಿರುವ ಕಾರಣ ಈ ಪರಿಸ್ಥಿತಿ ತಲೆದೋರಿದೆ. ಸಾರ್ವಜನಿಕರು ನೀರನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕು, ತುಂಗಾ ಅಣೆಕಟ್ಟೆಯ ನೀರನ್ನು ಕುಡಿಯಲು ಮಾತ್ರವೇ ಉಪಯೋಗಿಸಲಾಗುವುದು, ಬೇರೆ ಯಾವ ಉದ್ದೇಶಕ್ಕೂ ಬಳಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT