ಸೋಮವಾರ, ನವೆಂಬರ್ 29, 2021
20 °C
ಪ್ರಶಾಂತ ಆಚಾರ್ಯ ಪುತ್ತಿಗೆ ಮಠದ ಮುಂದಿನ ಉತ್ತರಾಧಿಕಾರಿ

ಫುತ್ತಿಗೆ ಮಠಕ್ಕೆ ಶಿಷ್ಯಸ್ವೀಕಾರ 22ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ:  ಉಡುಪಿಯ ಅಷ್ಟಮಠಗಳ ಪೈಕಿ ಒಂದಾದ ಪುತ್ತಿಗೆ ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಹಿರಿಯಡ್ಕ ಸಮೀಪದ ಪುತ್ತಿಗೆ ಗ್ರಾಮದ ಮೂಲಮಠದಲ್ಲಿ ಸೋಮವಾರ ಬೆಳಿಗ್ಗೆ 11.45ಕ್ಕೆ ಶಿಷ್ಯ ಸ್ವೀಕಾರ ಸಮಾರಂಭ ನಡೆಯಲಿದೆ.

‘ಪ್ರಶಾಂತ ಆಚಾರ್ಯ ಎಂಬ ವಟು ಪುತ್ತಿಗೆ ಮಠದ ಉತ್ತರಾಧಿಕಾರಿಯಾಗಲಿದ್ದಾರೆ. ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಸನ್ಯಾಸ ಸ್ವೀಕರಿಸಿ 45 ಸಂವತ್ಸರಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಶಿಷ್ಯ ಸ್ವೀಕಾರ ನಡೆಯುತ್ತಿರುವುದು ವಿಶೇಷ’ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.

ಯತಿಗಳ ಗೈರು?

ಈ ಸಮಾರಂಭದಲ್ಲಿ ಅಷ್ಟಮಠಗಳ ಯತಿಗಳು ಭಾಗವಹಿಸುವುದು ಅನುಮಾನವಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ. ‘ದ್ವಂದ್ವ
ಮಠವಾದ ಕೃಷ್ಣಾಪುರ ಮಠದ ಶ್ರೀಗಳು ಮಾತ್ರ ಭಾಗವಹಿಸಲಿದ್ದಾರೆ’ ಎಂದು ಪುತ್ತಿಗೆ ಶ್ರೀಗಳು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು