ರಾಜಕಾರಣ ನಿಂತ ನೀರಲ್ಲ: ಸಿದ್ದರಾಮಯ್ಯ

7

ರಾಜಕಾರಣ ನಿಂತ ನೀರಲ್ಲ: ಸಿದ್ದರಾಮಯ್ಯ

Published:
Updated:

ಮಂಗಳೂರು: 'ರಾಜಕಾರಣ ನಿಂತ ನೀರಲ್ಲ. ಬದಲಾವಣೆಗಳು ಆಗುತ್ತಲೇ ಇರುತ್ತವೆ' ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ನಗರದ ಪುರಭವನದಲ್ಲಿ ಶುಕ್ರವಾರ ನಡೆದ ಮಾಜಿ ಸಚಿವ ಬಿ.ಎ.ಮೊಹಿದೀನ್ ಅವರ ಆತ್ಮಕಥನ ' ನನ್ನೊಳಗಿನ ನಾನು'  ಬಿಡುಗಡೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ರಾಜಕೀಯದಲ್ಲಿ ಇವತ್ತು ರಾಜ ಆಗಿದ್ದವನು ನಾಳೆ ಭಿಕಾರಿ ಆಗಬಹುದು. ಇವತ್ತು ಭಿಕಾರಿ ಆಗಿದ್ದವನು ನಾಳೆ ರಾಜ ಆಗಬಹುದು. ಬದ್ಧತೆ ಇಲ್ಲದ ವ್ಯಕ್ತಿಗಳು ಅಧಿಕಾರಕ್ಕಾಗಿ ಎಲ್ಲಿಗೆ ಬೇಕಾದರೂ ಹೋಗುತ್ತಾರೆ' ಎಂದರು.

ಸಾಮಾಜಿಕ ನ್ಯಾಯದಿಂದ ವಂಚಿತರಾದ ಜನರಿಗೆ ನ್ಯಾಯ ಒದಗಿಸಬೇಕೆಂಬ ಡಿ.ದೇವರಾಜ ಅರಸು ಅವರ ಚಿಂತನೆಯಲ್ಲಿ ಮೊಹಿದೀನ್ ನಂಬಿಕೆ ಇರಿಸಿಕೊಂಡಿದ್ದರು. ಎಂದಿಗೂ ಅವರು ರಾಜಕಾರಣವನ್ನು ಸ್ವಾರ್ಥಕ್ಕೆ ಬಳಸಿಲಿಲ್ಲ ಎಂದು ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !