ಬುಧವಾರ, ಜನವರಿ 22, 2020
19 °C

ಉಪಚುನಾವಣೆ ಗೆಲುವು : 63 ಕೆ.ಜಿ. ಬೆಳ್ಳಿ ಗಟ್ಟಿ ದೇಣಿಗೆ ನೀಡಿದ ಆನಂದ್‌ ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಬಿಜೆಪಿಯ ಆನಂದ್‌ ಸಿಂಗ್‌ ಅವರು ಇಲ್ಲಿನ ಕೇರಿಗಳ ದೇವಸ್ಥಾನಗಳಿಗೆ ತೆರಳಿ ಪ್ರತಿ ದೇಗುಲಕ್ಕೆ ತಲಾ 9 ಕೆ.ಜಿ. ಬೆಳ್ಳಿ ಗಟ್ಟಿಗಳನ್ನು ದೇಣಿಗೆ ರೂಪದಲ್ಲಿ ನೀಡಿದರು.

ತಳವಾರ ಕೇರಿಯ ದುರುಗಮ್ಮ ದೇವಿ, ಬಾಣದಕೇರಿಯ ನಿಜಲಿಂಗಮ್ಮ ದೇವಿ, ಚಿತ್ರಕೇರಿಯ ತಾಯಮ್ಮ, ಉಕ್ಕಡಕೇರಿಯ ಹುಲಿಗೆಮ್ಮ ಹಾಗೂ ಜಲದುರ್ಗಮ್ಮ, ಮ್ಯಾಸಕೇರಿಯ ಹುಲಿಗೆಮ್ಮ, ಕೊಂಗಮ್ಮ ಹಾಗೂ ಕಲ್ಲಮ್ಮ ದೇವಿ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಬೆಳ್ಳಿ ಗಟ್ಟಿಗಳನ್ನು ಸಮರ್ಪಿಸಿದರು.

ಬೆಂಗಳೂರಿನ ಬಿಡದಿಯ ಈಗಲ್‌ಟನ್‌ ರೆಸಾರ್ಟಿನಲ್ಲಿ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಅವರಿಂದ ಹಲ್ಲೆಗೊಳಗಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿ ಬಂದಿದ್ದಾಗಲೂ ಸಿಂಗ್‌ ಎಲ್ಲಾ ದೇಗುಲಗಳಿಗೆ ತಲಾ 5 ಕೆ.ಜಿ. ಬೆಳ್ಳಿ ನೀಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು