ಬುಧವಾರ, ಅಕ್ಟೋಬರ್ 16, 2019
21 °C

ದೀಪಾವಳಿ ಹಬ್ಬಕ್ಕೆ ಯಶವಂತಪುರ–ಬೆಳಗಾವಿ ಸುವಿಧಾ ವಿಶೇಷ ರೈಲು

Published:
Updated:

ಹುಬ್ಬಳ್ಳಿ: ದೀಪಾವಳಿ ಹಬ್ಬದ ಪ್ರಯುಕ್ತ ನೈರುತ್ಯ ರೈಲ್ವೆಯು ಅ. 25ರಂದು ಯಶವಂತಪುರ–ಬೆಳಗಾವಿ ಸುವಿಧಾ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.

25ರಂದು ರಾತ್ರಿ 11 ಗಂಟೆಗೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಬೆಳಿಗ್ಗೆ 11.15ಕ್ಕೆ ಬೆಳಗಾವಿ ತಲುಪಲಿದೆ. ತುಮಕೂರು, ಅರಸೀಕೆರೆ, ಬಿರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಅ. 29ರಂದು ಸಂಜೆ 7 ಗಂಟೆಗೆ ಬೆಳಗಾವಿಯಿಂದ ಹೊರಡುವ ವಿಶೇಷ ರೈಲು ಮರುದಿನ ಬೆಳಿಗ್ಗೆ 6.20ಕ್ಕೆ ಯಶವಂತಪುರ ಮುಟ್ಟಲಿದೆ.

 

Post Comments (+)