ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ಸ್: ಮನೀಶ್, ಧನುಶಾಗೆ ಚಿನ್ನ

ನಾಲ್ಕನೇ ದಿನವೂ ಆತಿಥೇಯರ ಪಾರಮ್ಯ: 3 ಚಿನ್ನ
Last Updated 27 ನವೆಂಬರ್ 2018, 19:26 IST
ಅಕ್ಷರ ಗಾತ್ರ

ಮೂಡುಬಿದಿರೆ: ಮೈಸೂರು ವಿಶ್ವವಿದ್ಯಾಲಯದ ಎಂ.ಆರ್. ಧನುಶಾ ಮತ್ತು ಆತಿಥೇಯ ಮಂಗಳೂರು ವಿಶ್ವವಿದ್ಯಾಲಯದ ಮನೀಶ್‌ ಸಿಂಗ್‌ ಅವರು ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ನಲ್ಲಿ ಕ್ರಮವಾಗಿ ಹೆಪ್ಟಾಥ್ಲಾನ್ ಮತ್ತು ಪುರುಷರ ಪೋಲ್‌ವಾಲ್ಟ್‌ನಲ್ಲಿ ಚಿನ್ನದ ಪದಕ ಗೆದ್ದರು.

**

ಫಲಿತಾಂಶಗಳು

ಪುರುಷರು

1500 ಮೀ ಓಟ: ಅಭಿನಂದನ್ ಸುಂದರೇಶನ್ (ಕೇರಳ ವಿವಿ; ನೂತನ ದಾಖಲೆ. ಕಾಲ: 3 ನಿ. 49.55 ಸೆ: ಹಳೆಯದು; ಎಸ್‌. ಲಾಲ್‌ ಪಟೇಲ್‌ ಪಂಜಾಬ್‌ ವಿವಿ ಪಟಿಯಾಲಾ ಕಾಲ: 3 ನಿ. 50.79 ಸೆ)–1, ಶಶಿಭೂಷಣ್ ಸಿಂಗ್ (ಕ್ಯಾಲಿಕಟ್ ವಿವಿ)–2, ಅರುಣ್ ಕುಮಾರ್ (ಪಂಜಾಬ್‌ ವಿವಿ, ಪಟಿಯಾಲಾ)–3.

10,000 ಮೀ ಓಟ: ಬಿಪಿನ್‌ ಪಾಟೀಲ (ದೀನ್‌ ದಯಾಳ್‌ ಉಪಾಧ್ಯಾಯ ಗೋರಖಪುರ ವಿವಿ: ಕಾಲ: 30 ನಿ. 41.61 ಸೆ)–1, ಪಿಂಟೂ ಕುಮಾರ್‌ (ವಿನೋಬಾ ಭಾವೆ ವಿವಿ, ಜಾರ್ಖಂಡ್‌)–2, ಮೋಹನ್‌ ಸೈನಿ (ಕುಮೌನ್‌ ವಿವಿ ನೈನಿತಾಲ್‌)–3.

110 ಮೀ ಹರ್ಡಲ್ಸ್‌: ಮೊಹಮ್ಮದ್‌ ಫೈಸ್ (ಕೇರಳ ವಿಶ್ವವಿದ್ಯಾಲಯ: ಕಾಲ: 14.34 ಸೆಕೆಂಡ್‌)–1, ಪಾರಸ್‌ ಪಾಟೀಲ (ಸಾವಿತ್ರಿ ಬಾಯಿ ಫುಲೆ ವಿವಿ ಪುಣೆ)–2, ಪಿ‌. ಪ್ರವೀಣ್‌ ಕುಮಾರ್‌ (ಮದುರೆ ಕಾಮರಾಜ್‌ ವಿವಿ)–3,

ಪೋಲ್‌ ವಾಲ್ಟ್‌: ಮನೀಶ್‌ ಸಿಂಗ್‌ (ಮಂಗಳೂರು ವಿವಿ: ಎತ್ತರ: 4.75 ಮೀಟರ್ಸ್)–1, ಎಂ.ಸಂತೋಷ್‌ ಕುಮಾರ್‌ (ಮದ್ರಾಸ್‌ ವಿವಿ)–2, ಘನಶ್ಯಾಮ್‌ (ಲಕ್ಷ್ಮೀಬಾಯಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಸಿಕಲ್ ಎಜುಕೇಷನ್ ವಿವಿ, ಮಧ್ಯ ಪ್ರದೇಶ)–3,

ಜಾವೆಲಿನ್‌ ಥ್ರೋ: ಅಭಿಷೇಕ ಡ್ರಾಲ್‌ (ಮಂಗಳೂರು ವಿವಿ: ದೂರ: 74.29 ಮೀ)–1, ವಿಕ್ರಾಂತ್‌ ಮಲಿಕ್‌ (ಕುರುಕ್ಷೇತ್ರ ವಿವಿ)–2, ನಂದಕಿಶೋರ್‌ ಸಿಂಗ್‌ (ಮಂಗಳೂರು ವಿವಿ)–3,

ಮಹಿಳೆಯರು

1500 ಮೀಟರ್‌ ಓಟ: ಹರ್ಮಿಲಾನ್ ಬೈನ್ಸ್ (ಪಂಜಾಬ್‌ ವಿವಿ, ಪಟಿಯಾಲಾ: ಕಾಲ: 4 ನಿ. 25.95 ಸೆ)-1, ಬಬಿತಾ (ಕ್ಯಾಲಿಕಟ್ ವಿವಿ)-2, ದುರ್ಗಾ ದಿಯೋರೆ (ಸಾವಿತ್ರಿ ಬಾಯಿ ಫುಲೆ ವಿವಿ ಪುಣೆ)-3.

10,000 ಮೀಟರ್‌ ಓಟ: ಆರತಿ ಪಾಟೀಲ (ಸಾವಿತ್ರಿ ಬಾಯಿ ಫುಲೆ ವಿವಿ ಪುಣೆ; ಕಾಲ: 35 ನಿ. 38.08 ಸೆ.)–1, ಪ್ರಜಕ್ತಾ ಗೊಡ್ಬಿ (ರಾಷ್ಟ್ರಸಂತ ತುಕಡೊಜಿ ಮಹಾರಾಜ ವಿವಿ ನಾಗ್ಪುರ)–2, ಫೂಲನ್‌ ಪಾಲ್‌ (ದೀನ್‌ ದಯಾಳ್‌ ಉಪಾಧ್ಯಾಯ ಗೋರಖಪುರ ವಿವಿ ಉತ್ತರ ಪ್ರದೇಶ)–3.

100 ಮೀಟರ್‌ ಹರ್ಡಲ್ಸ್‌: ಸಪ್ನಾ ಕುಮಾರಿ (ವಿನೋಬಾ ಭಾವೆ ವಿವಿ ಜಾರ್ಖಂಡ್; ಕಾಲ: 13.77 ಸೆಕೆಂಡ್‌)–1, ಸಿ. ಕನ್ನಿಮೋಳಿ (ಮದ್ರಾಸ್‌ ವಿವಿ)–2, ಗೋಸಾವಿ ಅಂಕಿತಾ (ಸಾವಿತ್ರಿ ಬಾಯಿ ಫುಲೆ ವಿವಿ ಪುಣೆ)–3,

ಶಾಟ್‌ಪಟ್‌: ಅನಾಮಿಕಾ ದಾಸ್‌ (ಮಂಗಳೂರು ವಿವಿ: ದೂರ: 14.29 ಮೀ)–1, ಪರಮ್ ಜೋತ್‌ ಕೌರ್‌ (ಪಂಜಾಬ್‌ ವಿವಿ ಪಟಿಯಾಲ)–2, ಅಭಾಖತುವಾ (ವಿದ್ಯಾಸಾಗರ್‌ ವಿವಿ ಪಶ್ಚಿಮ ಬಂಗಾಳ)–3.

ಟ್ರಿಪಲ್‌ ಜಂಪ್‌: ರೇಣು (ಪಂಜಾಬ್‌ ವಿವಿ: ದೂರ: 13.09 ಮೀಟರ್‌ )–1, ಸಿವಾ ಅನ್ಬರಸಿ (ಮಂಗಳೂರು ವಿವಿ)–2, ಅನುಷಾ ಜಿ. ಪೂಜಾರಿ (ಡಾ.ಆರ್‌.ಎಂ.ಎಲ್‌.ಅವಧ್‌ ವಿವಿ, ಉತ್ತರ ಪ್ರದೇಶ)–3,

ಹೆಪ್ಟಥ್ಲಾನ್‌: ಧನುಶಾ ಎಂ.ಆರ್‌. (ಮೈಸೂರು ವಿವಿ; ಪಾಯಿಂಟ್‌: 4780)–1, ನಿಮ್ಮಿ ವಿ. ಒ. (ಮಹಾತ್ಮ ಗಾಂಧಿ ವಿವಿ ಕೋಟಯಂ)–2, ರಿಂಪಿ ಧಬಾಸ್‌ ( ಕುರುಕ್ಷೇತ್ರ ವಿವಿ)–3,

**

ಮರೆಯದ ಕ್ಷಣ

‘ಅಖಿಲ ಭಾರತ ಮಟ್ಟದಲ್ಲಿ ಪಡೆಯುತ್ತಿರುವ ಮೊದಲ ಚಿನ್ನದ ಪದಕ, ಈ ಹಿಂದೆ ರಾಜ್ಯ ಮಟ್ಟ ಜೂನಿಯರ್‌ ಹಂತದಲ್ಲಿ ಕಂಚು ಹಾಗೂ ಬೆಳ್ಳಿ ಪದಕ ಪಡೆದಿದ್ದೆ. ಪ್ರಬಲ ಸ್ಪರ್ಧೆಯ ನಡುವೆ ಚಿನ್ನ ಗಳಿಸಿದ್ದೇನೆ. ಇದು ಮರೆಯದ ಕ್ಷಣ’ ಎಂದು ಕ್ರೀಡಾಪಟು ಮನೀಶ್‌ ಸಿಂಗ್‌ ಖುಷಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT