ಮಂಗಳವಾರ, ಏಪ್ರಿಲ್ 20, 2021
25 °C
‘ಆಡಳಿತ ಸಂಪೂರ್ಣವಾಗಿ ಕುಸಿದಿದೆ’

ರಾಜಕೀಯ ಬೆಳವಣಿಗೆಗೆ ನಾನು ಜವಾಬ್ದಾರನಲ್ಲ: ಶ್ರೀನಿವಾಸ ಪ್ರಸಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ನಾನು ಮತ್ತು ಎಚ್‌.ವಿಶ್ವನಾಥ್‌ 45 ವರ್ಷಗಳಿಂದ ಸ್ನೇಹಿತರು. ಆಗಾಗ್ಗೆ ಭೇಟಿಯಾಗುತ್ತಿರುತ್ತೇವೆ. ಆದರೆ, ಈಗ ನಡೆದಿರುವ ರಾಜಕೀಯ ಬೆಳವಣಿಗೆಗೆ ನಾನು ಜವಾಬ್ದಾರನಲ್ಲ’ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌ ಭಾನುವಾರ ಇಲ್ಲಿ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಸಕ್ತ ರಾಜಕೀಯ ಬೆಳವಣಿಗೆಗೂ ಮುಂಚೆ ನಮ್ಮ ಭೇಟಿ ಆಗಿರುವುದು ಕಾಕತಾಳೀಯ ಅಷ್ಟೆ’ ಎಂದರು.

‘ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರಾಗಿದ್ದವರನ್ನು ಸಮನ್ವಯ ಸಮಿತಿಗೆ ಸೇರಿಸಿಕೊಳ್ಳಲಿಲ್ಲ. ಈ ಹಿಂದೆ ಅವರು ಹಳ್ಳಿ ಹಕ್ಕಿಯ ಹಾಡು ಎಂಬ ಪುಸ್ತಕ ಬರೆದಿದ್ದರು. ಈಗ ಹಳ್ಳಿ ಹಕ್ಕಿಯ ಗೋಳು ಎಂಬ ಪುಸ್ತಕ ಬರೆಯಬೇಕಿದೆ’ ಎಂದರು. 

‘ಈಗಿನ ರಾಜಕೀಯ ಬೆಳವಣಿಗೆಗಳಿಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರಣ. ಈ ದೋಸ್ತಿ ಸರ್ಕಾರದಲ್ಲಿ ಸಮನ್ವಯ ಎಂಬುದೇ ಇಲ್ಲ. ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಶಾಸಕರಲ್ಲಿ ಅತೃಪ್ತಿ ಇದೆ’ ಎಂದು ನುಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು