ಶುಕ್ರವಾರ, ನವೆಂಬರ್ 15, 2019
24 °C

ಎಸ್‌ಟಿಗೆ ಕೋಲಿ ಸಮಾಜ: ಸಿ.ಎಂ ಭರವಸೆ

Published:
Updated:

ಬೆಂಗಳೂರು: ‘ಕೋಲಿ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ (ಎಸ್‌ಟಿ) ಸೇರಿಸುವ ಬಗ್ಗೆ ಸರ್ಕಾರ ಉತ್ಸುಕವಾಗಿದೆ. ಕೇಂದ್ರ ಸರ್ಕಾರದ ಬಳಿಗೆ ನಾನೇ ಹೋಗಿ ಇದರ ಬಗ್ಗೆ ಮತ್ತೊಮ್ಮೆ ಒತ್ತಾಯ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಸಂಸದ ಉಮೇಶ್‌ ಜಾಧವ್‌, ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್, ಡಾ.ಎ.ಬಿ.ಮಾಲಕರೆಡ್ಡಿ ಅವರ ನೇತೃತ್ವದಲ್ಲಿ ಕಲಬುರ್ಗಿ ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಂದಿದ್ದ ನಿಯೋಗಕ್ಕೆ ಅವರು ಈ ಭರವಸೆ ನೀಡಿದರು.

‘ಕೋಲಿ ಸಮಾಜವನ್ನು ಕೂಡಲೇ ಎಸ್‌ಟಿಗೆ ಸೇರಿಸಬೇಕು. ಈ ಹಿಂದೆ ನೀವೇ ಎಸ್‌ಟಿಗೆ ಸೇರಿಸುವಂತೆ ಕೇಂದ್ರಕ್ಕೆ ‍ಪತ್ರ ಬರೆದಿದ್ದರೂ ಯಾವುದೇ ಕ್ರಮವೂ ಜರುಗಿಲ್ಲ’ ಎಂದು ನಿಯೋಗದ ಸದಸ್ಯರು ಹೇಳಿದರು. 

ಪ್ರತಿಕ್ರಿಯಿಸಿ (+)