218 ಮದ್ಯದಂಗಡಿ ಸ್ಥಳಾಂತರಕ್ಕೆ ಬಾಕಿ

7
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮಾಹಿತಿ

218 ಮದ್ಯದಂಗಡಿ ಸ್ಥಳಾಂತರಕ್ಕೆ ಬಾಕಿ

Published:
Updated:

ಬೆಂಗಳೂರು: ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿ ಒಂದೂವರೆ ವರ್ಷ ಕಳೆದ ಬಳಿಕವೂ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿನ 218 ಮದ್ಯದಂಗಡಿಗಳ ಸ್ಥಳಾಂತರ ಆಗಿಲ್ಲ.

ಹೆದ್ದಾರಿಗಳಿಂದ 500 ಮೀಟರ್ ಒಳಗಡೆ ಮದ್ಯದಂಗಡಿಗಳು ಇರಬಾರದು ಎಂದು ಸುಪ್ರೀಂ ಕೋರ್ಟ್‌ 2016ರ ಡಿಸೆಂಬರ್‌ 15ರಂದು ಆದೇಶ ಹೊರಡಿಸಿತ್ತು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ 3,515 ಮದ್ಯದಂಗಡಿಗಳನ್ನು ಅಬಕಾರಿ ಇಲಾಖೆ ಮುಚ್ಚಿತ್ತು. ಇದರಿಂದ 1 ಲಕ್ಷ ಉದ್ಯೋಗ ಕಳೆದುಕೊಂಡಿದ್ದರು. ಬೆಂಗಳೂರಿನ ಇಂದಿರಾನಗರ, ಎಂ.ಜಿ.ರಸ್ತೆ ಸುತ್ತಮುತ್ತಲಿನ ಬಾರ್‌ಗಳೂ ಬಂದ್‌ ಆಗಿದ್ದವು.

ಡಿಸೆಂಬರ್‌ 15ರ ಆದೇಶವನ್ನು ಮಾರ್ಪಾಡು ಮಾಡಬೇಕು ಎಂದು ಕೋರಿ ಮದ್ಯ ವರ್ತಕರ ಸಂಘಗಳು ಮೇಲ್ಮನವಿ ಸಲ್ಲಿಸಿದ್ದವು. 20 ಸಾವಿರ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಹೆದ್ದಾರಿ ಪಕ್ಕ 220 ಮೀಟರ್‌ ದೂರದಲ್ಲಿ ಬಾರ್‌ ನಡೆಸಲು ಅನುಮತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್‌ 2017ರ ಏಪ್ರಿಲ್‌ನಲ್ಲಿ ಆದೇಶ ಮಾರ್ಪಾಡು ಮಾಡಿತ್ತು. ಇದರಿಂದ ನಗರದಲ್ಲಿನ ಬಾರ್‌ಗಳಿಗೆ ಜೀವದಾನ ಸಿಕ್ಕಿತ್ತು. 

ವಿಧಾನಸಭೆಯಲ್ಲಿ ಬಿಜೆಪಿಯ ಕೆ.ಎಸ್‌.ಈಶ್ವರಪ್ಪ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ‘1,667 ಮದ್ಯದಂಗಡಿಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಬಾರ್‌ ಮಾಲೀಕರು ಸನ್ನದು ಸ್ಥಳಾಂತರ ಕೋರಿ ಸೂಕ್ತ ಸ್ಥಳ ಆಯ್ಕೆ ಮಾಡಿ ಅರ್ಜಿ ಸಲ್ಲಿಸದ ಕಾರಣ ಉಳಿದ ಅಂಗಡಿಗಳ ಸ್ಥಳಾಂತರ ಆಗಿಲ್ಲ’ ಎಂದಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !