ಪೋನ್ ಕದ್ದಾಲಿಕೆಯ ತನಿಖೆಯನ್ನು ನನ್ನ ಮನವಿ ಮೇರೆಗೆ ಸಿಬಿಐಗೆ ಒಪ್ಪಿಸಲಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇತ್ತೀಚಿನ 'ಆಪರೇಷನ್ ಕಮಲ'ದಲ್ಲಿಯೂ ಕೋಟ್ಯಂತರ ರೂ.ಗಳ ದುರ್ವ್ಯವಹಾರ ನಡೆದಿದೆ ಎಂಬ ಆರೋಪ ಇದೆ. ಅದರ ಬಗ್ಗೆಯೂ ಸಿಬಿಐನಿಂದ ತನಿಖೆ ನಡೆಸಬೇಕೆಂದು @CMofKarnataka ಅವರನ್ನು ಆಗ್ರಹಿಸುತ್ತೇನೆ.
ರಾಜ್ಯದಲ್ಲಿ ಹಿಂದೆ @BJP4Karnataka ಅಧಿಕಾರದಲ್ಲಿದ್ದಾಗ ನಮ್ಮ ಪಕ್ಷದ ಸತತ ಒತ್ತಾಯದ ಹೊರತಾಗಿಯೂ ಒಂದೇ ಒಂದು ಹಗರಣವನ್ನು ಸ್ವಯಂಪ್ರೇರಿತರಾಗಿ ಸಿಬಿಐ ತನಿಖೆಗೆ ಒಪ್ಪಿಸದೆ ಇದ್ದ @BJP4Karnatakaಕ್ಕೆ ಈಗ ಇದ್ದಕ್ಕಿದ್ದಂತೆ ಕೇಂದ್ರ ತನಿಖಾ ಸಂಸ್ಥೆಯ ಮೇಲೆ ನಂಬಿಕೆ ಹುಟ್ಟಿರುವುದು ಆಶ್ಚರ್ಯಕರ ಬೆಳವಣಿಗೆ.
ಫೋನ್ ಕದ್ದಾಲಿಕೆ ತನಿಖೆ ಸಿಬಿಐಗೆ ವಹಿಸಿದೆ. ತನಿಖೆಯನ್ನು ರಾಜ್ಯ ತನಿಖಾ ಸಂಸ್ಥೆಗಳೆ ಮಾಡಬಹುದಿತ್ತು.ಜೊತೆಗೆ ಕದ್ದಾಲಿಕೆಯಿಂದ ಬಹಿರಂಗಗೊಳ್ಳುವ ಗಂಭೀರ ಕ್ರಿಮಿನಲ್ ಪ್ರಕರಣಗಳು,ಲಂಚ ಕೊಡಕೊಳ್ಳುವ ವ್ಯವಹಾರಗಳು,ನೀತಿಗೆಟ್ಟ ಕ್ರಮಗಳು, ರಾಜ್ಯದ್ರೋಹಕೆಲಸಗಳು ತನಿಖೆಗೆ ಒಳಪಡಬೇಕು,ಅಂಥ ಪ್ರಕರಣಗಳಲ್ಲಿ ಭಾಗಿಯಾದವರು ತನಿಖಾ ವ್ಯಾಪ್ತಿಗೆ ಬರಬೇಕು.