ಭಾನುವಾರ, ಆಗಸ್ಟ್ 25, 2019
23 °C
ಥೊರಾಸಿಕ್ ಸ್ಕೋಲಿಯೋಸಿಸ್ ಕಾಯಿಲೆ

ಬೆನ್ನು ಶಸ್ತ್ರಚಿಕಿತ್ಸೆಗೆ ಬೇಕಿದೆ ₹3 ಲಕ್ಷ; ನೆರವಿನ ನಿರೀಕ್ಷೆಯಲ್ಲಿ ಬಾಲಕಿ

Published:
Updated:

ಬೆಂಗಳೂರು: ಸುಳ್ಯದ 10 ವರ್ಷ ವಯಸ್ಸಿನ ಹುಡುಗಿಗೆ ಬೆನ್ನು ನೋವು ಆರಂಭವಾಗಿ ಕ್ರಮೇಣ ಬೆನ್ನು ಸಂಪೂರ್ಣ ಬಾಗಿದೆ. ಈಕೆ ಥೊರಾಸಿಕ್ ಸ್ಕೋಲಿಯೋಸಿಸ್(Thoracic Scoliosis) ಎಂಬ ರೋಗಕ್ಕೆ ತುತ್ತಾಗಿದ್ದಾಳೆ. ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿರುವುದಾಗಿ ವೈದ್ಯರು ಹೇಳಿದ್ದು, ಸುಮಾರು ₹3 ಲಕ್ಷ ಖರ್ಚಾಗುವುದಾಗಿ ತಿಳಿಸಿದ್ದಾರೆ. 

ಬೆಂಗಳೂರಿನ ಕೋಟೆ ಫೌಂಡೇಷನ್‌ ಹುಡುಗಿಯ ಚಿಕಿತ್ಸೆಗಾಗಿ ದಾನಿಗಳ ನೆರವು ಕೇಳಿದೆ. 

ಸುಳ್ಯ ತಾಲ್ಲೂಕು ದೇವಚಳ್ಳ ಗ್ರಾಮದ ತಳೂರು ಮೆತ್ತಡ್ಕ ನಿವಾಸಿ ಸತೀಶ್ ನಾಯ್ಕ ಮತ್ತು ಗಾಯತ್ರಿ ನಾಯ್ಕ ದಂಪತಿಯ ಮಗಳು ಅಮೃತಾ(10 ವರ್ಷ). ದಂಪತಿಯ ಮೂವರು ಪುತ್ರಿಯರಲ್ಲಿ ಈಕೆ ಎರಡನೇ ಮಗಳು. ಕಳೆದ 6 ತಿಂಗಳಿನಿಂದ ಥೊರಾಸಿಕ್ ಸ್ಕೋಲಿಯೋಸಿಸ್ ಎಂಬ ರೋಗದಿಂದ ಬಳಲಿದ್ದಾಳೆ. 

ಬೆನ್ನು ನೋವು ಆರಂಭವಾಗಿ ಕ್ರಮೇಣ ಬೆನ್ನು ಸಂಪೂರ್ಣ ಬಾಗಿದೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ. ಇದನ್ನು ಪರೀಕ್ಷಿಸಿದ ಮಂಗಳೂರಿನ ಯೆನೆಪೋಯ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮೂಲಕ ಸರಿಪಡಿಸುವ ಭರವಸೆ ನೀಡಿದ್ದಾರೆ. ಇದಕ್ಕೆ ಸುಮಾರು ₹3 ಲಕ್ಷಕ್ಕೂ ಹೆಚ್ಚು ಖರ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಆದರೆ ಆಕೆಯ ತಂದೆಯ ದುಶ್ಚಟಗಳಿಂದಾಗಿ ಮನೆಯ ಕಡೆ ಗಮನ ನೀಡದ ಕಾರಣ  ಊಟಕ್ಕೂ ಪರದಾಡಬೆಕಾದ ಪರಿಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ಕೋಟೆ ಫೌಂಡೇಷನ್‌ ಸದಸ್ಯರು ಈ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಆಸ್ಪತ್ರೆಯವರು ಮಗುವಿನ ಕೌಟುಂಬಿಕ ಪರಿಸ್ಥಿತಿಯನ್ನು ಅರಿತು ಶಸ್ತ್ರಚಿಕಿತ್ಸೆಯ ಶುಲ್ಕವನ್ನು ಮಾತ್ರ ಭರಿಸಲು ಹೇಳಿದ್ದಾರೆ. ಒಟ್ಟು 11 ಗಂಟೆಗಳ ಕಾಲ ನಡೆಯುವ ಈ ಶಸ್ತ್ರ ಚಿಕಿತ್ಸೆಗೆ ₹3 ಲಕ್ಷದವರೆಗೂ ಖರ್ಚಾಗಬಹುದು. ಅಷ್ಟೊಂದು ಹಣ ನೀಡುವ ಶಕ್ತಿ ಆ ತಾಯಿಯ ಬಳಿ ಇಲ್ಲ. ದಾನಿಗಳು ಸಹಾಯ ಮಾಡಬೇಕೆಂದಲ್ಲಿ ಕೋಟೆ ಫೌನಂಡೇಷನ್‌ ಖಾತೆಗೆ ಹಣ ಕಳಿಸಬಹುದು.

(ಆಯುಷ್ಮಾನ್‌ ಭಾರತ ಯೋಜನೆಯಡಿಯಲ್ಲೂ ಈ ಶಸ್ತ್ರಚಿಕಿತ್ಸೆ ನಡೆಯದು)

ಬ್ಯಾಂಕ್‌ ಮಾಹಿತಿ:
ಯೆಸ್ ಬ್ಯಾಂಕ್, ಬನಶಂಕರಿ, ಬೆಂಗಳೂರು. 

ಖಾತೆ ಸಂಖ್ಯೆ: 046494600000251, ಎಂಐಸಿಆರ್‌ ಕೋಡ್‌– 560532010

ಐಎಫ್‌ಎಸ್‌ಇ ಕೋಡ್‌– YESB0000464.

ಮೊಬೈಲ್‌ ಸಂಖ್ಯೆ: 9740994719

Beneficiary Name: Kote Foundation
Bank: Yes Bank SB A/C No: 046494600000251
MICR Code: 560532010, IFSC: YESB0000464
Branch: Banashankari, Bengaluru

Post Comments (+)