ಹೊಸಪೇಟೆಯಲ್ಲಿ ಟಿಪ್ಪು ಜಯಂತಿ; ಕಾಂಗ್ರೆಸ್ ಶಾಸಕ ಆನಂದ್ ಸಿಂಗ್‌ ಗೈರು

7

ಹೊಸಪೇಟೆಯಲ್ಲಿ ಟಿಪ್ಪು ಜಯಂತಿ; ಕಾಂಗ್ರೆಸ್ ಶಾಸಕ ಆನಂದ್ ಸಿಂಗ್‌ ಗೈರು

Published:
Updated:

ಹೊಸಪೇಟೆ: ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಇಲ್ಲಿನ ಒಳಾಂಗಣ ಕ್ರೀಂಡಾಂಗಣದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಆರಂಭವಾಗಿದೆ. 

ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಕಾರ್ಯಕ್ರಮಕ್ಕೆ ಗೈರು. ಹಿಂದಿನ ವರ್ಷ ಬಿಜೆಪಿಯಲ್ಲಿದ್ದರೂ ಪಕ್ಷದ ವಿರೋಧದ ನಡುವೆ ಆನಂದ್ ಸಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಸ್ಲಿಮರ ಬೆಂಬಲದಿಂದ ಗೆದ್ದರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ‌ ಇರುವುದು ಸರಿಯಲ್ಲ ಎಂದು ಕೆಲ ಮುಸ್ಲಿಂ ಸಮಾಜದ ಮುಖಂಡರು ಆಕ್ಷೇಪ ಎತ್ತಿದ್ದಾರೆ.

ಉಪವಿಭಾಗಾಧಿಕಾರಿ ಪಿ.ಎನ್.ಲೋಕೇಶ್, ತಹಶೀಲ್ದಾರ್ ಎಚ್.ವಿಶ್ವನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೆಂಕೋಬಪ್ಪ, ಡಿವೈಎಸ್ಪಿ ಲಕ್ಷ್ಮಿನಾರಾಯಣ, ಮಾಜಿ ಶಾಸಕ ರತನ್ ಸಿಂಗ್, ಮುಸ್ಲಿಂ‌ ಸಮಾಜದ‌ ಮುಖಂಡರಾದ ಮೊಹಮ್ಮದ್ ಇಮಾಮ್ ನಿಯಾಜಿ, ಅಬ್ದುಲ್ ಖಾದರ್ ರಫಾಯ್, ಬಡಾವಲಿ, ಖಾಜಾ ಹುಸೇನ್ ನಿಯಾಜಿ, ಸಲೀಂ, ಮಾಬುಸಾಬ್, ಮುನೀರ್, ಪ್ರಾಧ್ಯಾಪಕ ಚಂದ್ರಶೇಖರ್ ಶಾಸ್ತ್ರಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !