ಭಾನುವಾರ, ನವೆಂಬರ್ 17, 2019
24 °C

ಟಿಪ್ಪುವಿನ ಎರಡೂ ಮುಖ ದಾಖಲಾಗಲಿ: ವಿಶ್ವೇಶತೀರ್ಥ ಸ್ವಾಮೀಜಿ

Published:
Updated:

ಉಡುಪಿ: ‘ಟಿಪ್ಪು ಸುಲ್ತಾನ್‌ ಒಳ್ಳೆಯದನ್ನೂ ಮಾಡಿದ್ದಾನೆ. ಕೆಟ್ಟ ಕೆಲಸವನ್ನೂ ಮಾಡಿದ್ದಾನೆ. ಹಾಗಾಗಿ ಟಿಪ್ಪುವಿನ ಎರಡೂ ಮುಖಗಳು ಪಠ್ಯದಲ್ಲಿ ದಾಖಲಾಗಬೇಕು’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದರು.

ಪೇಜಾವರ ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟಿಪ್ಪು ಉತ್ತಮ ಆಡಳಿತ ಕೊಟ್ಟಿದ್ದಾನೆ. ಆಡಳಿತದಲ್ಲಿ ಸುಧಾರಣೆ ತಂದಿದ್ದಾನೆ. ಹಾಗೆಯೇ ವಿವಾದಿತ ವ್ಯಕ್ತಿ ಕೂಡ. ಕೊಡಗಿನವರ ಹಾಗೂ ಕ್ರೈಸ್ತರ ಹತ್ಯಾಕಾಂಡ ನಡೆಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಹಾಗಾಗಿ, ಟಿಪ್ಪುವಿನ ಎರಡೂ ಮುಖಗಳನ್ನು ಪಠ್ಯದಲ್ಲಿ ದಾಖಲಿಸಬೇಕು. ಇತಿಹಾಸದಲ್ಲಿ ಸತ್ಯಾಂಶ ಇರಬೇಕೇ ಹೊರತು, ಅತಿಶಯೋಕ್ತಿ ಇರಬಾರದು’ ಎಂದು ಅಭಿಪ್ರಾಯಪಟ್ಟರು.‌

‘ಜೈಲಿನಿಂದ ಬಿಡುಗಡೆ ಮಾಡುವಂತೆ ಬ್ರಿಟಿಷರಿಗೆ ಸಾವರ್ಕರ್‌ ಕ್ಷಮಾಪಣಾ ಪತ್ರ ಬರೆದಿದ್ದು ತಪ್ಪು. ಆದರೆ, ಪತ್ರ ಬರೆದ ಉದ್ದೇಶ ಬೇರೆ ಇತ್ತು. ಸಾಯುವವರೆಗೂ ಜೈಲಿನಲ್ಲಿ ಕೊಳೆಯುವ ಬದಲು ಬಿಡುಗಡೆಯಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುವುದು ಸಾವರ್ಕರ್‌ ಉದ್ದೇಶವಾಗಿತ್ತು’ ಎಂದು ಸ್ವಾಮೀಜಿ ಸಮರ್ಥನೆ ನೀಡಿದರು.

ಪ್ರತಿಕ್ರಿಯಿಸಿ (+)