ಭಾನುವಾರ, ನವೆಂಬರ್ 17, 2019
24 °C

ಟಿಪ್ಪು ಪಠ್ಯಕ್ಕೆ ಕೊಕ್‌: ತಿಂಗಳ ಕಾಲಾವಕಾಶ

Published:
Updated:

ಬೆಂಗಳೂರು: ಪಠ್ಯಪುಸ್ತಕದಿಂದ ಟಿಪ್ಪು ಕುರಿತ ಅಧ್ಯಾಯವನ್ನು ತೆಗೆಯುವ ಸಂಬಂಧ ಗುರುವಾರ ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ ಇತಿಹಾಸ ಪಠ್ಯಪುಸ್ತಕ ರಚನಾ ಸಮಿತಿ ಸಭೆ ನಡೆದಿದ್ದು, ನಿರ್ಧಾರಕ್ಕೆ ಬರಲು ಒಂದು ತಿಂಗಳ ಕಾಲಾವಕಾಶ ಕೇಳಲಾಗಿದೆ.

ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಎಚ್. ಎನ್‌. ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಅಪ್ಪಚ್ಚು ರಂಜನ್‌ ಅವರ ಅಹವಾಲು ಆಲಿಸಲಾಯಿತು. ಎಲ್ಲಾ ಆಯಾಮಗಳಿಂದ ಅಧ್ಯಯನ ಮಾಡಲು ಸಮಯ ಬೇಕು ಎಂದು ಸದಸ್ಯರು ಅಭಿಪ್ರಾಯಪಟ್ಟರು’ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)