ವಿಹಾರಕ್ಕೆ ಬಂದಿದ್ದ ವ್ಯಕ್ತಿ ಸಮುದ್ರಪಾಲು

ಭಾನುವಾರ, ಮೇ 26, 2019
27 °C
ಈಜುಗಾರರ ಸಂಘದಿಂದ ಮುಂದುವರಿದ ಶೋಧ ಕಾರ್ಯ

ವಿಹಾರಕ್ಕೆ ಬಂದಿದ್ದ ವ್ಯಕ್ತಿ ಸಮುದ್ರಪಾಲು

Published:
Updated:

ಉಳ್ಳಾಲ: ಮೊಗವೀರಪಟ್ನ ಸಮುದ್ರ ವಿಹಾರಕ್ಕೆ ಸ್ನೇಹಿತನ ಜತೆಗೆ ಬಂದಿದ್ದ ವ್ಯಕ್ತಿಯೊಬ್ಬರು ಭಾನುವಾರ ಸಮುದ್ರ ಪಾಲಾಗಿದ್ದಾರೆ.

ಮೃತ ದೇಹಕ್ಕಾಗಿ ಸ್ಥಳೀಯ ಈಜುಗಾರರ ಸಂಘ ಶೋಧ ಕಾರ್ಯ ಮುಂದುವರಿಸಿದೆ. ಬೆಂಗಳೂರು ಶಿವಾಜಿನಗರ ನಿವಾಸಿ ರಿಜ್ವಾನ್‌(45) ಸಮುದ್ರ ಪಾಲಾದವರು.

ಗೆಳೆಯನ ಜತೆಗೆ ಉಳ್ಳಾಲ ಮೊಗವೀರಪಟ್ನ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದರು. ಸಮುದ್ರದ ಅಲೆಗಳ ಜತೆಗೆ ಆಟವಾಡುತ್ತಿದ್ದಂತೆ ಅಪ್ಪಳಿಸಿದ ಅಲೆಗೆ ರಿಝ್ವಾನ್ ಸಮುದ್ರ ಪಾಲಾಗಿದ್ದಾರೆ‌. ಅಲೆಗಳ ಅಬ್ಬರಕ್ಕೆ ರಿಜ್ವಾನ್‌ ಅವರನ್ನು ರಕ್ಷಿಸಲು ಗೆಳೆಯನಿಗೂ ಕೂಡಾ ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಸಮುದ್ರಪಾಲಾದ ರಿಝ್ವಾನ್ ದೇರಳಕಟ್ಟೆಯಲ್ಲಿ ಫುಟ್‌ವೇರ್ ಅಂಗಡಿ ನಡೆಸುತ್ತಿದ್ದರು.

ಸ್ಥಳೀಯ ಈಜುಗಾರರರು ಹಾಗೂ ಪೊಲೀಸರ ಎಚ್ಚರಿಕೆಯನ್ನು ಪ್ರವಾಸಿಗರು ಗಮನಿಸುತ್ತಿಲ್ಲ. ಇದರಿಂದಾಗಿ ಇಂತಹ ಅನಾಹುತಗಳು ನಡೆಯುತ್ತಲೇ ಇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !