ಬುಧವಾರ, ಏಪ್ರಿಲ್ 1, 2020
19 °C

ಕ್ಯಾಸಿನೊ ತೆರೆಯುತ್ತೇವೆ ಎಂದು ಹೇಳಿಲ್ಲ:ಸಿ.ಟಿ. ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಪ್ರವಾಸೋದ್ಯಮ ಆಕರ್ಷಣೆಗೆ ಹತ್ತಾರು ಬಗೆಯಲ್ಲಿ ಅವಕಾಶ ಇದೆ ಎಂದು ಎಫ್‌ಕೆಸಿಸಿಐ ಸಂವಾದದಲ್ಲಿ ಪ್ರಶ್ನೆಗೆ ಉತ್ತರಿಸಿದ್ದೆ. ಆಕರ್ಷಣೆಯ ಹತ್ತಾರು ಅಂಶಗಳಲ್ಲಿ ಕ್ಯಾಸಿನೊ ಕೂಡಾ ಒಂದು ಎಂದು ಹೇಳಿದ್ದೆ. ರಾಜ್ಯದಲ್ಲಿ ಕ್ಯಾಸಿನೊ ಸೆಂಟರ್‌ (ಜೂಜು ಕೇಂದ್ರ) ತೆರೆಯುತ್ತೇವೆ ಎಂದು ಹೇಳಿಲ್ಲ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಂವಾದದಲ್ಲಿ ಗೋವಾ ಬಗ್ಗೆ ಪ್ರಸ್ತಾಪ ಬಂತು. ಗೋವಾ ಪಬ್‌ ಮತ್ತು ಕ್ಲಬ್‌ ಪ್ರಸಿದ್ಧಿಯಾಗಿದೆ. ಅದೇ ರೀತಿ ಶ್ರೀಲಂಕಾ, ಹಾಂಗ್‌ಕಾಂಗ್‌, ಸಿಂಗಾಪುರ, ಥಾಯ್ಲೆಂಡ್‌, ಲಾಸ್‌ವೆಗಾಸ್‌ಗಳು ಕ್ಯಾಸಿನೊದಿಂದಪ್ರವಾಸಿಗರನ್ನು ಆಕರ್ಷಿಸಿವೆ. ಶ್ರೀಲಂಕಾಕ್ಕೆ ಭಾರತದ, ಕರ್ನಾಟಕದ ಎಷ್ಟು ಮಂದಿ ಹೋಗುತ್ತಾರೆ, ಗೋವಾಕ್ಕೆ ಕರ್ನಾಟಕದ ಎಷ್ಟು ಮಂದಿ ಹೋಗುತ್ತಾರೆ ಎಂಬುದನ್ನು ಪಟ್ಟಿ ಮಾಡಿದರೆ ನನ್ನ ಮಾತಿನಲ್ಲಿ ಎಷ್ಟು ಸತ್ಯ ಇದೆ ಎಂಬುದು ಅರ್ಥವಾಗುತ್ತದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು