ದೋಸ್ತಿಗಳ ಮಧ್ಯೆ ಹಣಾಹಣಿ

7

ದೋಸ್ತಿಗಳ ಮಧ್ಯೆ ಹಣಾಹಣಿ

Published:
Updated:

ಬೆಂಗಳೂರು: ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾ ನಗರಪಾಲಿಕೆಗಳ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ್ದು, ಮೂರು ಕಡೆಗಳಲ್ಲಿ ಮೈತ್ರಿ ಆಡಳಿತದ ಪಾಲುದಾರನಾಗಿರುವ ಜೆಡಿಎಸ್‌, ದೋಸ್ತಿಗಳ ಜತೆಯೇ ಹಣಾಹಣಿಗೆ ಸಜ್ಜಾಗಬೇಕಿದೆ.

ಮೈಸೂರಿನಲ್ಲಿ ಜೆಡಿಎಸ್‌– ಬಿಜೆಪಿ, ತುಮಕೂರಿನಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮತ್ತು ಶಿವಮೊಗ್ಗದಲ್ಲಿ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿವೆ. ರಾಜ್ಯ ಸರ್ಕಾರದಲ್ಲಿ ‘ದೋಸ್ತಿ’ ಪಕ್ಷಗಳಾಗಿರುವ ಜೆಡಿಎಸ್‌ ಮತ್ತು ಕಾಂಗ್ರೆಸ್‌, ಈಗಾಗಲೇ ಘೋಷಣೆಯಾಗಿರುವ 105 ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿವೆ. ಅದರ ಬೆನ್ನಿಗೆ ಮೂರು ಪಾಲಿಕೆಗಳ ಚುನಾವಣೆಗೂ ಮುಹೂರ್ತ ನಿಗದಿಯಾಗಿದೆ.

ಚುನಾವಣೆಗೆ ಸಿದ್ಧತೆ: ಈ ಮೂರೂ ಮಹಾನಗರಪಾಲಿಕೆಗಳ ಚುನಾವಣೆಗೆ ಇದೇ 13 ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಲಾಗಿದ್ದು, ನೀತಿ ಸಂಹಿತೆ ಇದೇ ಸೆಪ್ಟಂಬರ್‌ 3 ರವರೆಗೆ ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಯಲ್ಲಿರಲಿದೆ.

ಮೈಸೂರು 65, ಶಿವಮೊಗ್ಗ 35 ಮತ್ತು ತುಮಕೂರು ಪಾಲಿಕೆಯ 35 ಸೇರಿ ಒಟ್ಟು 135 ವಾರ್ಡ್‌ಗಳಲ್ಲಿ ಮತದಾನ ನಡೆಯಲಿದೆ. 1,284 ಮತಗಟ್ಟೆಗಳಿವೆ. ಒಟ್ಟು 13,33,153 ಮತದಾರರಿದ್ದಾರೆ.

ಮತ ಯಂತ್ರಗಳನ್ನು ಬಳಸಿ ಚುನಾವಣೆಯನ್ನು ನಡೆಸಲಾಗುತ್ತಿದೆ. ಚುನಾವಣೆ ನಡೆಯುತ್ತಿರುವ 3 ಮಹಾನಗರ ಪಾಲಿಕೆಗಳ ಚುನಾವಣೆಗಾಗಿ ಒಟ್ಟು 1534 ಬ್ಯಾಲೆಟ್‌ ಯೂನಿಟ್‌ಗಳನ್ನು ಹಾಗೂ 1534 ಕಂಟ್ರೋಲ್‌ ಯೂನಿಟ್‌ಗಳನ್ನು ಸಿದ್ಧಗೊಳಿಸಲಾಗಿದೆ.

ನಾಮಪತ್ರ ಸಲ್ಲಿಕೆ ಇಂದಿನಿಂದ

105 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾಮಪತ್ರ ಸಲ್ಲಿಕೆ ಶುಕ್ರವಾರದಿಂದ ಆರಂಭವಾಗಲಿದೆ.

ಇದೇ 29 ರಂದು ಮತದಾನ ನಡೆಯಲಿದ್ದು, ಸೆಪ್ಟೆಂಬರ್ 1ರಂದು ಮತ ಎಣಿಕೆ ನಡೆಯಲಿದೆ.

ವೇಳಾ ಪಟ್ಟಿ

ಆ. 13 ಚುನಾವಣಾ ಅಧಿಸೂಚನೆ
ಆ.20 ನಾಮಪತ್ರ ಸಲ್ಲಿಕೆಗೆ ಕೊನೆ ದಿನ
ಆ.21 ನಾಮಪತ್ರ ಪರಿಶೀಲನೆ
ಆ.23 ನಾಮ ಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನ
ಆ.31 ಚುನಾವಣೆ
ಸೆ.2 ಮರು ಮತದಾನ
ಸೆ.3 ಮತಗಳ ಎಣಿಕೆ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !