7

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಅನಂತಕುಮಾರ ಹೆಗಡೆ

Published:
Updated:

ಕಾರವಾರ: ‘ಅಧಿಕಾರಿಗಳು ಸಭೆಗೆ ಬರುವಾಗ ಹೋಮ್ ವರ್ಕ್ ಮಾಡಿ ಬರಬೇಕು. ಸರ್ಕಾರಿ ಕೆಲಸ ಅಂದ್ರೆ ಅಸಡ್ಡೆ ಯಾಕೆ? ನಮಗೇನು ಬೇರೆ ಕೆಲಸ ಇಲ್ಲದೇ ಸಭೆ ಮಾಡ್ತಿದ್ದೇವಾ?’ ಎಂದು ಅಧಿಕಾರಿ‌ಗಳ ವಿರುದ್ಧ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು. 

ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ಖಾನಾಪುರ ಮತ್ತು ಕಿತ್ತೂರು ವಿಭಾಗದಲ್ಲಿ 37 ಕಾಮಗಾರಿಗಳ ಪೈಕಿ 34 ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದರು.  ಇದರಿಂದ ಮತ್ತಷ್ಟು ಅಸಮಾಧಾನಗೊಂಡ ಸಚಿವರು, ‘ಕಳೆದ ನಾಲ್ಕೈದು ಸಭೆಗಳಿಂದಲೂ ಇದನ್ನೇ ಹೇಳುತ್ತಿದ್ದೀರಿ. ಎಷ್ಟು ದಿನ ಅಂತ ನಕರಾ ಮಾಡ್ತೀರಿ? ನಿಮ್ಮ ಕಾರ್ಯಪಾಲಕ ಎಂಜಿನಿಯರ್‌ರನ್ನು ಕರೆಸಿ. ಅವರು ಬಂದು ಮಾತನಾಡುವವರೆಗೂ ನೀವು ಇಲ್ಲಿಂದ ಹೋಗುವಂತಿಲ್ಲ’ ಎಂದು ತಾಕೀತು ಮಾಡಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2014ರಿಂದ ಈವರೆಗೆ 851 ಕಾಮಗಾರಿಗಳನ್ನು ಶಿಫಾರಸು ಮಾಡಲಾಗಿತ್ತು. 838 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಶೇಕಡ 95ರಷ್ಟು ಕಾಮಗಾರಿಗಳಿಗೆ ಯೋಜನೆ ಸಿದ್ಧವಾಗಿದೆ. 281 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸಭೆಗೆ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 20

  Happy
 • 4

  Amused
 • 1

  Sad
 • 2

  Frustrated
 • 2

  Angry

Comments:

0 comments

Write the first review for this !