ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ಮೇಲ್ದಂಡೆ ಯೋಜನೆ | ಭೂ ಸ್ವಾಧೀನ ಪ್ರಕ್ರಿಯೆ ನಿಧಾನ: ರಮೇಶ ಜಾರಕಿಹೊಳಿ

Last Updated 6 ಮೇ 2020, 9:25 IST
ಅಕ್ಷರ ಗಾತ್ರ

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆ ತುಂಬಾ ನಿಧಾನ ಆಗುತ್ತಿದೆ, ಇದನ್ನು ಚುರುಕುಗೊಳಿಸಬೇಕಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
‘ಭೂಸ್ವಾಧೀನ ಕಾರ್ಯವನ್ನು ಚುರುಕುಗೊಳಿಸಲು ಚರ್ಚೆ ಮಾಡಿದ್ದೇವೆ. ಮುಖ್ಯಮಂತ್ರಿ ಜೊತೆಗೆ ಇನ್ನೊಂದು ಸುತ್ತಿನ ಸಭೆ ನಡೆಸುತ್ತೇವೆ’ಎಂದರು.

'16 ಸಾವಿರ ಎಕರೆ ಈಗ ಭೂ ಸ್ವಾಧೀನ ಆಗಿದೆ. 35 ಸಾವಿರ ಎಕರೆ ಬಾಕಿ ಇದೆ. ಪರಿಹಾರ ಹಣ ಒಂದೊಂದು ತಾಲ್ಲೂಕಿನಲ್ಲಿ ಒಂದೊಂದು ರೀತಿ ಇದೆ. ಇದೂ ಕೂಡ ಸಮಸ್ಯೆ ಆಗಿದೆ' ಎಂದರು.

'ಆಲಮಟ್ಟಿ ಜಲಾಶಯದ ಅಣೆಕಟ್ಟು ಎತ್ತರ 524ಕ್ಕೆ ಏರಿಕೆ ಆಗಿರುವುದರಿಂದ 75 ಸಾವಿರ ಎಕರೆ ಮುಳಗಡೆ ಆಗಿದೆ, ಪುನರ್ವಸತಿ ಈ ಭೂಸ್ವಾಧೀನ ಅಗತ್ಯವಾಗಿದೆ' ಎಂದರು.

ಇದೇ ಸಂದರ್ಭದಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ‘ಎತ್ತಿನಹೊಳೆ ಕಾಮಗಾರಿ ಭರದಿಂದ ಸಾಗಿದೆ.
ಅರಸೀಕೆರೆ ತನಕ ಕಾಲುವೆ ಕೆಲಸ ಆಗಿದೆ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT