ಜಿಲ್ಲೆಯಲ್ಲಿ ಗುರುವಾರ ಸಾವಿಗೀಡಾದ ಮಹಿಳೆ ಮತ್ತು 39 ವರ್ಷ ವಯಸ್ಸಿನ ವ್ಯಕ್ತಿ ಸೇರಿದಂತೆ ಇಬ್ಬರಿಗೆ ಸೋಂಕು ದೃಡಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 238ಕ್ಕೆ ಏರಿಕೆಯಾಗಿದೆ. 196 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 35 ಜನ ಸಕ್ರಿಯ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.