ಚುನಾವಣೆ: ಹೃದಯಾಘಾತದಿಂದ 4 ಸಾವು

ಭಾನುವಾರ, ಮೇ 26, 2019
30 °C

ಚುನಾವಣೆ: ಹೃದಯಾಘಾತದಿಂದ 4 ಸಾವು

Published:
Updated:

ಹುಬ್ಬಳ್ಳಿ: ಹೃದಯಾಘಾತದಿಂದ ಒಬ್ಬರು ಚುನಾವಣಾ ಸಿಬ್ಬಂದಿ ಹಾಗೂ ಇಬ್ಬರು ಮತದಾರರು ಮೃತಪಟ್ಟಿದ್ದಾರೆ. ಮತ್ತೊಬ್ಬ ಸಿಬ್ಬಂದಿ ಮತ ಹಾಕಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆ ಸಿರುಗುಪ್ಪ ಪಟ್ಟಣದ ವಿವೇಕಾನಂದ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ ಚುನಾವಣೆಗೆ ನಿಯೋಜನೆಗೊಂಡಿದ್ದ ಗೋವಿಂದಗಿರಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎ.ಎನ್.ತಿಪ್ಪೇಸ್ವಾಮಿ ಮಂಗಳವಾರ ನಸುಕಿನಲ್ಲಿ ಹೃದಯಾಘಾತದಿಂದ ನಿಧನರಾದರು.

ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಅಹಿರಸಂಗ ಮತಗಟ್ಟೆ 32ರಲ್ಲಿ ಮಹಾದೇವಿ ಸಿಂದಖೇಡ (55) ಮತ ಚಲಾಯಿಸಿ ಹೊರಗೆ ಬರುತ್ತಿದ್ದಂತೆ, ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆ ಕೆರೂರ ಪಟ್ಟಣದ ಹಳಪೇಟೆ ಬಡಾವಣೆಯ ಮಲ್ಲಯ್ಯ ದೇಸಾಯಿಮಠ (56) ಮತ ಹಾಕಿ ಮನೆಗೆ ಬಂದ ಕೆಲ ಕ್ಷಣಗಳಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಆತ್ಮಹತ್ಯೆ: ಬೆಳಗಾವಿ ಜಿಲ್ಲೆ ಯಮಕನಮರಡಿಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಹುಕ್ಕೇರಿ ತಾಲ್ಲೂಕಿನ ಕಣವಿನಟ್ಟಿಯ ಗ್ರಾಮ ಸಹಾಯಕ ಸುರೇಶ ಭೀಮಪ್ಪ ಸನದಿ (28) ಮತ ಹಾಕಿದ ನಂತರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮತಗಟ್ಟೆ 99ರಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಿಗ್ಗೆ 10ವರೆಗೆ ಚುನಾವಣಾ ಸಿಬ್ಬಂದಿಗೆ ಅಗತ್ಯ ಸೌಕರ್ಯಗಳನ್ನು ಅವರು ಒದಗಿಸಿದ್ದರು. ಬೆಳಿಗ್ಗೆ 10 ಗಂಟೆಗೆ ಮತದಾನ ಮಾಡಿದ ನಂತರ ತಮ್ಮ ಮನೆ ಹಿಂದಿನ ಮಾವಿನ ಗಿಡಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಇದೇ 26ರಂದು ಮದುವೆ ನಿಗದಿಯಾಗಿತ್ತು. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.

ದಶರಥ ಕುಲಕರ್ಣಿ ಅವರು ನಿಧನರಾದ ಬಳಿಕ ಪುತ್ರ ಸತೀಶ್‌ ಕುಲಕರ್ಣಿ ನವಲಗುಂದ ಮತಗಟ್ಟೆಯಲ್ಲಿ ಚಲಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !