ಬಾವಿಯಲ್ಲಿ ಉಕ್ಕಿದ ನೀರಿನ ಸೆಲೆ!

ಮಂಗಳವಾರ, ಜೂನ್ 18, 2019
28 °C

ಬಾವಿಯಲ್ಲಿ ಉಕ್ಕಿದ ನೀರಿನ ಸೆಲೆ!

Published:
Updated:
Prajavani

ಹಿರಿಯೂರು: 700–800 ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದರೂ ನೀರು ಸಿಗದ ಪರಿಸ್ಥಿತಿ. ಹೀಗಾಗಿ ಐದಾರು ವರ್ಷಗಳಿಂದ ಬತ್ತಿಹೋಗಿದ್ದ 25 ಅಡಿ ಆಳದ ತಾಲ್ಲೂಕಿನ ಮ್ಯಾದನಹೊಳೆ ಮಜ್ಜನ ಬಾವಿಯೊಂದರಲ್ಲಿ ನಾಲ್ಕು ದಿನಗಳಿಂದ ಒಮ್ಮೆಲೆ ನೀರಿನ ಸೆಲೆ ಉಕ್ಕುವ ಮೂಲಕ ಅಚ್ಚರಿ ಮೂಡಿಸಿದೆ.

ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿರುವ ವೀರಭದ್ರೇಶ್ವರ ದೇವಸ್ಥಾನವಿದ್ದು, ದೇವರ ಮಜ್ಜನಕ್ಕೆಂದು ನಿರ್ಮಿಸಿದ್ದ ಈ ತೆರೆದ ಬಾವಿಯಲ್ಲಿ ನೀರು ಕಂಡುಬಂದಿದೆ.

‘ಗ್ರಾಮದ ಮುಖಂಡರಾದ ಎಂ.ಆರ್. ಪಾಂಡುರಂಗಪ್ಪ, ಎಂ.ಆರ್.ಪುಟ್ಟಸ್ವಾಮಿ, ಮಡಿವಾಳ ರಂಗನಾಥಪ್ಪ, ಪೂಜಾರ್ ಬಸಣ್ಣ ಗ್ರಾಮಸ್ಥರ ಸಹಕಾರದೊಂದಿಗೆ ಬಾವಿಯನ್ನು ಶುಚಿಗೊಳಿಸಿದ ಮೇಲೆ ಮೂರು ದಿನಗಳಲ್ಲಿ ಕನಿಷ್ಠ 4 ಅಡಿ ನೀರು ಬಂದಿದೆ’ ಎಂದು ಗ್ರಾಮದ ರೈತ ಎಂ.ಎಚ್.ಷಣ್ಮುಖ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೀರು ಬಂದಿರುವುದು ಪವಾಡ ಎನಿಸಿದೆ. ಗಂಗಾ ಪೂಜೆ ಮಾಡಿದ್ದು, ದೇವರ ಮಜ್ಜನಕ್ಕೆ ಈಗ ಇದೇ ನೀರನ್ನು ಬಳಸಲಾಗುತ್ತಿದೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !