ಧಾರವಾಡ, ಗದಗ ಜಿಲ್ಲೆಯ ಕೆರೆ ತುಂಬಿಸಲು ಮಲಪ್ರಭಾ ನೀರು; ಪ್ರಾದೇಶಿಕ ಆಯುಕ್ತ ಆದೇಶ

7

ಧಾರವಾಡ, ಗದಗ ಜಿಲ್ಲೆಯ ಕೆರೆ ತುಂಬಿಸಲು ಮಲಪ್ರಭಾ ನೀರು; ಪ್ರಾದೇಶಿಕ ಆಯುಕ್ತ ಆದೇಶ

Published:
Updated:

ಬೆಳಗಾವಿ:  ಧಾರವಾಡ ಜಿಲ್ಲೆಯ ನವಲಗುಂದ, ಹುಬ್ಬಳ್ಳಿ, ಕುಂದಗೋಳ ಹಾಗೂ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿ ನೀರನ್ನು ಇದೇ ತಿಂಗಳ 19ರಿಂದ ಹರಿಯಬಿಡಲು ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಆದೇಶ ಹೊರಡಿಸಿದ್ದಾರೆ.

ಜಲಾಶಯದ ಬಲದಂಡೆ ಕಾಲುವೆಯ ಮೂಲಕ ಧಾರವಾಡ ಜಿಲ್ಲೆಯ ಕೆರೆಗಳಿಗೆ ನೀರು ಹರಿಸಲಾಗುವುದು. ಪ್ರತಿದಿನ 250 ಕ್ಯುಸೆಕ್ಸ್‌ನಂತೆ 15 ದಿನಗಳವರೆಗೆ ನೀರು ಬಿಡಲಾಗುವುದು. ಶಾಖಾ ಕಾಲುವೆ ಮೂಲಕ ಗದಗ ಜಿಲ್ಲೆಯ ನರಗುಂದ ಭಾಗಕ್ಕೆ ಪ್ರತಿದಿನ 100 ಕ್ಯುಸೆಕ್ಸ್‌ನಂತೆ 10 ದಿನಗಳವರೆಗೆ ನೀರು ಹರಿಯಲಿದೆ.

ಈ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಹಾಗೂ ಕೆರೆಗಳನ್ನು ತುಂಬಿಸಿಕೊಳ್ಳಲು ಮಾತ್ರ ಬಳಸಿಕೊಳ್ಳಬೇಕು. ಕೃಷಿ ಹಾಗೂ ಇತರ ಉದ್ದೇಶಗಳಿಗೆ ಬಳಸಬಾರದೆಂದು ಸೂಚಿಸಿದ್ದಾರೆ. ನೀರೆತ್ತಲು ಪಂಪ್‌ಸೆಟ್‌ ಬಳಸಿದರೆ ಅವುಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !