ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: 5 ಕೆ.ಜಿ ತೂಕದ ಮಗುವಿಗೆ ಜನ್ಮ ನೀಡಿದ ತಾಯಿ

Last Updated 9 ಡಿಸೆಂಬರ್ 2018, 5:02 IST
ಅಕ್ಷರ ಗಾತ್ರ

ಮೈಸೂರು: 5 ಕೆ.ಜಿ ತೂಕದ ಮಗುವಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದಾರೆ.

ಇಲ್ಲಿನ ಅಗ್ರಹಾರ ನಿವಾಸಿ ಸಿದ್ದರಾಜು ಅವರ ಪತ್ನಿ ರಾಜೇಶ್ವರಿ ಅವರಿಗೆ ಜಯನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಮಗು ಜನಿಸಿದೆ.

ಸಾಮಾನ್ಯವಾಗಿ ನವಜಾತ ಶಿಶುಗಳು ಗರಿಷ್ಠ 3.5 ಕೆ.ಜಿ ವರೆಗೆ ತೂಕ ಇರುತ್ತವೆ. ಆದರೆ, ಈ ಮಗು 5 ಕೆ.ಜಿ ಇರುವುದು ಅಪರೂಪದ ವಿಚಾರವಾಗಿದೆ. ಮಗುವಿನ ತೂಕ ಹೆಚ್ಚಿರುವುದನ್ನು ಗಮನಿಸಿದ ವೈದ್ಯರು, ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದಾರೆ. ತಾಯಿ– ಮಗು ಆರೋಗ್ಯವಾಗಿದ್ದಾರೆ.

‘ತಾಯಿಗೆ ಸಕ್ಕರೆ ಕಾಯಿಲೆ ಇದ್ದರೆ ಹುಟ್ಟುವ ಮಗು ಹೆಚ್ಚು ತೂಕ ಹೊಂದಿರುತ್ತದೆ. ಆದರೆ, ಈ ಪ್ರಕರಣದಲ್ಲಿ ತಾಯಿಗೆ ಸಕ್ಕರೆ ಕಾಯಿಲೆ ಇಲ್ಲ. ಆದರೂ, ಮಗು ಹೆಚ್ಚು ತೂಕ ಹೊಂದಿರುವುದು ವಿಸ್ಮಯಕಾರಿ ವಿಚಾರ’ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT