ಸೋಮವಾರ, ಸೆಪ್ಟೆಂಬರ್ 16, 2019
26 °C

ಇಂದು ವಿಶ್ವ ಫೋಟೊಗ್ರಫಿ ದಿನ: ಇಲ್ಲಿದೆ ಚಿತ್ರದ ಹಿಂದಿನ ಛಾಯಾಗ್ರಾಹಕರ ಅನುಭವ ಕಥನ

Published:
Updated:

ಕ್ಯಾಮೆರಾ ಕಣ್ಣಿನಲ್ಲಿ ಜಗತ್ತು ನೋಡುವ ಛಾಯಾಗ್ರಾಹಕರಿಗೆ ಜಗತ್ತೇ ತಾನು ಚೌಕಟ್ಟು ಹಾಕಲು ಕಾದಿರುವ ಕಲಾಕೃತಿಯಂತೆ ಕಾಣಿಸುತ್ತಿರುತ್ತೆ. ಅವರ ಭಾವುಕ ಮನಸ್ಸು ಹಿಂಸೆ, ದುರಂತಗಳಿಗೆ ತೀವ್ರವಾಗಿ ಸ್ಪಂದಿಸುತ್ತವೆ. ಎಂಥದ್ದೇ ಸಮಯದಲ್ಲೂ ಗಟ್ಟಿಯಾಗಿ ನಿಂತು ಚಿತ್ರ ಸೆರೆಹಿಡಿಯುವ ಛಾಯಾಗ್ರಾಹಕರಿಗೆ ಒಂದೊಂದು ಫೋಟೊ ಹಿಂದೆಯೂ ಬೆರೆತು ಹೋಗಿರುವ ಬಹಳಷ್ಟು ಕಥೆಗಳಿವೆ. ಅವರು ಅನುಭವಿಸಿದ ತೊಳಲಾಟ, ನಿದ್ರೆ ಬಾರಲು ಬಿಡದ ಘಟನೆ, ಕಾಡುವ ನೆನಪುಗಳನ್ನು ಪ್ರಜಾವಾಣಿಯ ಛಾಯಾಗ್ರಾಹಕರು ಇಲ್ಲಿ ಹಂಚಿಕೊಂಡಿದ್ದಾರೆ. 

* ನನ್ನ ಕಣ್ಣು ಬ್ಲರ್ ಆಗಿತ್ತು, ಚಿತ್ರ ಶಾರ್ಪ್ ಆಗಿಯೇ ಬಂದಿತ್ತು, ಮನಸು ಮುದುಡಿತ್ತುನನ್ನ ಕಣ್ಣು ಬ್ಲರ್ ಆಗಿತ್ತು, ಚಿತ್ರ ಶಾರ್ಪ್ ಆಗಿಯೇ ಬಂದಿತ್ತು, ಮನಸು ಮುದುಡಿತ್ತು

ನವೆಂಬರ್ 24, 2018. ಆ ದಿನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದುರಂತ ಕಂಡು ನನ್ನ ಮನಸ್ಸು ಅಕ್ಷರಶಃ ಜರ್ಝರಿತವಾಗಿತ್ತು... https://bit.ly/2P1C7uF

*  'ರಾಜ್ಯ ಆಳುವವರ ಬಗ್ಗೆ ಜಿಗುಪ್ಸೆ ಹುಟ್ಟಿದ ಆ ಕ್ಷಣ ಬೈಲೈನ್ ಗುಂಗಿನಿಂದ ಹೊರಬಂದೆ'

ಹೆಣ್ಣು ಮಕ್ಕಳು ಬತ್ತಿದ ನದಿಯಲ್ಲಿ ಮರಳನ್ನು ಅಗೆದು ನೀರಿನ ಒಸರಿಗೆ ಗಂಟೆ ಗಟ್ಟಲೆ ಕಾಯುತ್ತಾ ಒಂದು ಕೊಡ ನೀರು ತುಂಬಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ ಚಿತ್ರ ತೆಗೆಯುತಿದ್ದಾಗ ನನ್ನ ತಲೆಯೊಳಗೆ ಕೇವಲ ಪೇಜ್‌ ಒನ್ ಬೈಲೈನ್‌ ಮಾತ್ರ ಓಡಾಡುತಿತ್ತು... https://bit.ly/2Ne8VOt

* ಬರಗಾಲದ ನೆನಪು | ಬಿರುಕುಬಿಟ್ಟ ಖಾಲಿ ಜಲಾಶಯದಲ್ಲಿ ನೀರು ಹುಡುಕುವ ಕುರಿಗಳು

ಸತತ 16 ವರ್ಷಗಳ ಕಾಲ ಬರಗಾಲ ಎದುರಿಸಿದ ಗಟ್ಟಿ ಜಿಲ್ಲೆ ನಮ್ಮದು. ಆದರೂ ಕೂಡ ಇಲ್ಲಿನ ಜನರ ಪ್ರಮುಖ ಉದ್ಯೋಗ ಈಗಲೂ ಕೂಡ ಕೃಷಿಯೇhttps://bit.ly/2NeHZyg

* ಕಾಡು ಮಂಗಗಳ ಜೊತೆಗೆ ನಿತ್ಯ ಆಡುವ ಅಲ್ಲಾಪುರದ ಸಮರ್ಥನ ಚಿತ್ರ ಸಿಕ್ಕಿದ್ದೇ ಅದೃಷ್ಟ

ಕೆಲವು ವೇಳೆ ಅಂದುಕೊಂಡಿಂದ್ದಕ್ಕಿತ ಹೆಚ್ಚು ಒಂದೊಂದು ಚಿತ್ರಗಳು ದಾಖಲೆ ಸೃಷ್ಟಿಸುತ್ತವೆ. ಅದಕ್ಕೆ ನಮ್ಮ ತಾಳ್ಮೆ, ಚಾತುರ್ಯ, ಕಾಯಕನಿಷ್ಠೆ ಅಗತ್ಯ. https://bit.ly/2Za1zOj

* ಬೆನ್ನಿಗೆ ಹಳೇ ಪಾತ್ರೆ, ಮುಂದಿದೆ ಹೊಸ ಹಾದಿ...

ಕೆಲಸ ಇಲ್ಲ ಎಂದು ಸುತ್ತಾಡುವವರಿಗೆ, ಆತ್ಮಹತ್ಯೆ ಮಾಡಿಕೊಳ್ಳುವವರಿಗಂತೂ ಈ ಚಿತ್ರ ಬದುಕಬೇಕು ಎನ್ನುವ ಸೆಲೆಯನ್ನು ಹುಟ್ಟಿಸದೇ ಇರದು. https://bit.ly/2P0mK5D

* ಪ್ರತಿ ಮಳೆಯಲ್ಲಿಯೂ ಕಾಡುವ ನೆನಪಿನಾಳದ ತಳ್ಳುಗಾಡಿ

ಬೇರೆ ಯಾವ ವೃತ್ತಿಯಲ್ಲೂ ಮಳೆ ಬಂದಾಗ ಎಲ್ಲಾದರೂ ಸೂರಿನಡಿ ನಿಂತುಕೊಂಡು ನಮ್ಮನ್ನು ರಕ್ಷಿಸಿಕೊಳ್ಳುವ ಅವಕಾಶವಿದೆ. ಆದರೆ ಪತ್ರಿಕಾ ಛಾಯಾಗ್ರಾಹಕರಿಗೆ ಮಳೆಯಲ್ಲಿ ತೊಯ್ಸಿಕೊಂಡು ಒಳ್ಳೆಯ ಫೊಟೋ ತೆಗೆಯುವ ಸವಾಲು... https://bit.ly/2MwTGRx

* ಆಶಾವಾದದ ಕ್ಷಣ...

ಮಳೆ ನೀರಿನಲ್ಲಿ ಇಟ್ಟಿಗೆಗಳು ಒದ್ದೆಯಾದವು. ಸೂರಿನ ಭರವಸೆ ಸಿಗದಾಯಿತು. ಆದರೆ, ಆಶಾಭಾವ ಕುಂದಿಲ್ಲ ಎಂಬುದಕ್ಕೆ ಈ ಮಕ್ಕಳೇ ಸಾಕ್ಷಿಯಾದರು. https://bit.ly/2MqgSke

* ‘ಚಿತ್ರಬ್ರಹ್ಮ’ನ ಹೆಜ್ಜೆ ಜಾಡು ಹಿಡಿದು...

ಕ್ಯಾಮೆರಾದಲ್ಲಿ ಚಿತ್ರಿಸಿಕೊಂಡ ಚಿತ್ರಗಳು ಮುಂದಿನ ಪೀಳಿಗೆಗೆ ಜೀವಂತ ಸಾಕ್ಷಿಯಾಗಿ ಉಳಿಯುತ್ತವೆ...https://bit.ly/2z9eu8R
 

Post Comments (+)