ಮಂಗಳವಾರ, ನವೆಂಬರ್ 19, 2019
29 °C

ವಾರದ ಎಲ್ಲ ದಿನ ಯಶವಂತಪುರ–ಶಿವಮೊಗ್ಗ ರೈಲು

Published:
Updated:

ಶಿವಮೊಗ್ಗ: ವಾರದಲ್ಲಿ ಆರು ದಿನ ಸಂಚರಿಸುತ್ತಿದ್ದ ಶಿವಮೊಗ್ಗ–ಯಶವಂತಪುರ ಜನಶತಾಬ್ದಿ ರೈಲಿನ ಸಂಚಾರವನ್ನು ಅ.14ರಿಂದ ಏಳೂ ದಿನಗಳಿಗೆ ವಿಸ್ತರಣೆ ಮಾಡಲಾಗಿದ್ದು, ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಜನಶತಾಬ್ದಿ ರೈಲು ಶಿವಮೊಗ್ಗದಿಂದ ಬೆಳಿಗ್ಗೆ 5.30ಕ್ಕೆ ಹೊರಟು ಯಶವಂತಪುರವನ್ನು ಬೆಳಿಗ್ಗೆ 9.50ಕ್ಕೆ ತಲುಪುತ್ತದೆ. ಹಾಗೆಯೇ ಯಶವಂತಪುರದಿಂದ ಸಂಜೆ 5.30ಕ್ಕೆ ಹೊರಟು ರಾತ್ರಿ 9.50ಕ್ಕೆ ಶಿವಮೊಗ್ಗ ತಲುಪುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪ್ರತಿಕ್ರಿಯಿಸಿ (+)