ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಫಲಿತಾಂಶ ಪ್ರಕಟ

Last Updated 25 ಮೇ 2019, 7:01 IST
ಅಕ್ಷರ ಗಾತ್ರ

ಬೆಂಗಳೂರು:ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಶನಿವಾರ 11 ಗಂಟೆಗೆ ಪ್ರಕಟವಾಯಿತು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಫಲಿತಾಂಶವನ್ನು ಪ್ರಕಟಿಸಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (http://kea.kar.nic.in) ಸೇರಿಂದಂತೆ http://cet.kar.nic.in,http://karresults.nic.inವೆಬ್‌ಸೈಟ್‌ಗಳಲ್ಲೂ ಫಲಿತಾಂಶ ನೋಡಬಹುದು.

ಈ ಬಾರಿ 1.90 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದು, ಶೇ 92ರಷ್ಟು ಮಂದಿ ಪರೀಕ್ಷೆ ಬರೆದಿದ್ದರು.

ರ‍್ಯಾಂಕ್ಪಡೆದ ವಿದ್ಯಾರ್ಥಿಗಳು

ಎಂಜಿನಿಯರಿಂಗ್‌ ವಿಭಾಗ: ಜಫಿನ್‌ ಬಿಜು (ಪ್ರಥಮ) ಬೆಂಗಳೂರು, ಚಿನ್ಮಯಿ (ದ್ವಿತೀಯ) ಮಂಗಳೂರು, ಸಾಯಿ ಸಾಕೇತಿಕ ಚೆಕೂರಿ (ತೃತೀಯ) ಬೆಂಗಳೂರು

ನ್ಯಾಚುರೋಪತಿ ಮತ್ತು ಯೋಗ: ಮಹೇಶ್‌ ಆನಂದ್‌ (ಪ್ರಥಮ) ಬೆಂಗಳೂರು, ವಸುದೇವ್‌ (ದ್ವಿತೀಯ) ಮೈಸೂರು, ಉದಿತ್‌ ಮೋಹನ್‌ (ತೃತೀಯ) ಬೆಂಗಳೂರು

ಬಿಎಸ್‌ಸಿ ಕೃಷಿ: ಕೀರ್ತನಾ ಎಂ ಅರುಣ್‌ (ಪ್ರಥಮ) ಬೆಂಗಳೂರು, ಭುವನ್‌ ಬಿ (ದ್ವಿತೀಯ) ಮಂಗಳೂರು, ಶ್ರೀಕಾಂತ್‌ ಎಂಲ್‌ (ತೃತೀಯ) ಹಾಸನ

ಬಿಎಸ್‌ಸಿ ಪಶುವಿಜ್ಞಾನ: ಪಿ ಮಹೇಶ್‌ ಆನಂದ್‌ (ಪ್ರಥಮ) ಬೆಂಗಳೂರು, ಉದಿತ್‌ ಮೋಹನ್‌ (ದ್ವಿತೀಯ) ಬೆಂಗಳೂರು, ಸಾಯಿ ರಾಮ್‌ (ತೃತೀಯ) ಬೆಂಗಳೂರು

ಫಾರ್ಮಸಿ: ಸಾಯಿ ಸಾಕೇತಿಕಾ ಚೆಕೂರಿ(ಪ್ರಥಮ) ಬೆಂಗಳೂರು,ಜಫಿನ್‌ ಬಿಜು(ದ್ವಿತೀಯ) ಬೆಂಗಳೂರು,ಆರ್‌.ಚಿನ್ಮಯ್‌ (ತೃತೀಯ) ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT