ಗುರುವಾರ , ಡಿಸೆಂಬರ್ 3, 2020
23 °C

ಪಾಕ್‌ ಪಡೆಗಳಿಂದ ಗಡಿ ಉಲ್ಲಂಘನೆ: ಅಫ್ಗಾನಿಸ್ತಾನ ದೂರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಪಾಕಿಸ್ತಾನದ ಸೇನಾಪಡೆಗಳು ಗಡಿಯನ್ನು ಉಲ್ಲಂಘಿಸಿ, ತನ್ನ ಭೂ ಪ್ರದೇಶದೊಳಗೆ ಪ್ರವೇಶಿಸುತ್ತಿವೆ ಎಂದು ಅಫ್ಗಾನಿಸ್ತಾನ ದೂರಿದೆ.

ಈ ಸಂಬಂಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪತ್ರ ಬರೆದಿರುವ ಅಫ್ಗಾನಿಸ್ತಾನ, ಪರಿಸ್ಥಿತಿ ಉದ್ವಿಗ್ನಗೊಳ್ಳುವ ಮುನ್ನವೇ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ವಿಶ್ವಸಂಸ್ಥೆಯಲ್ಲಿ ಅಫ್ಗಾನಿಸ್ತಾನದ ಕಾಯಂ ಪ್ರತಿನಿಧಿ ಅದೆಲ್‌ ರಾಜ್‌ ಅವರು ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿರುವ ಜರ್ಮಿನಿಗೆ ಬರೆದ ಪತ್ರದಲ್ಲಿ, ‘ಅಫ್ಗಾನಿಸ್ತಾನದ ಗಡಿ ಠಾಣೆಗಳ ಮೇಲೆ, ಕುನಾರ್‌ ಪ್ರಾಂತ್ಯದ ಸರಕಾನೊ ಹಾಗೂ ಅಸಾದ್‌ ಅಬಾದ್‌ ಜಿಲ್ಲೆಗಳ ನಾಗರಿಕರ ಮೇಲೆ ಪಾಕಿಸ್ತಾನದ ಪಡೆಗಳು ಅಪ್ರಚೋದಿತ ದಾಳಿ ನಡೆಸಿವೆ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು