ಮಂಗಳವಾರ, ನವೆಂಬರ್ 30, 2021
21 °C

ಭಾರತ ಮೂಲದ ಸಂಶೋಧಕಿ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹ್ಯೂಸ್ಟನ್‌: ವಾಯುವಿಹಾರಕ್ಕಾಗಿ ತೆರಳಿದ್ದ ಭಾರತೀಯ ಮೂಲದ ಸಂಶೋಧಕಿಯೊಬ್ಬರನ್ನು ಹತ್ಯೆ ಮಾಡಲಾಗಿದೆ.

ಟೆಕ್ಸಾಸ್‌ನ ಪ್ಲಾನೊ ನಗರದ ನಿವಾಸಿ ಸರ್ಮಿಷ್ಟಾಸೇನ್‌(43) ಹತ್ಯೆಗೀಡಾದವರು. ಇವರು ಆಗಸ್ಟ್‌ 1ರಂದು ವಾಯುವಿಹಾರಕ್ಕಾಗಿ ಸಮೀಪದ ಚಿಶೋಲಮ್‌ ಟ್ರಯಲ್‌ ಪಾರ್ಕ್‌ಗೆ ತೆರಳಿದ್ದರು. ಈ ಜಾಗದಲ್ಲಿ ಇವರ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಪ್ರಕರಣ ಸಂಬಂಧ ಬಕಾರಿ ಅಬಿಯೋನಾ ಮಾನ್‌ಕ್ರೀಫ್ ಎಂಬಾತನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯವೊಂದು ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು