ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಗ್ರಹ ಉಡಾವಣೆಗೆ ಮ್ಯಾನ್ಮಾರ್ ಸಿದ್ಧತೆ

Last Updated 24 ಜುಲೈ 2020, 12:34 IST
ಅಕ್ಷರ ಗಾತ್ರ

ಮೀಕ್‍ಟಿಲಾ: ಮ್ಯಾನ್ಮಾರ್ ತನ್ನ ಪ್ರಥಮ ಉಪಗ್ರಹವನ್ನು 2021ರ ಆರಂಭದಲ್ಲಿ ಉಡಾವಣೆ ಮಾಡುವ ಗುರಿಯೊಂದಿಗೆ ಸಿದ್ಧತೆ ನಡೆಸುತ್ತಿದೆ. ಪ್ರಾಕೃತಿಕ ವಿಕೋಪಗಳ ಕುರಿತು ಮುನ್ನೆಚ್ಚರಿಕೆ ನೀಡುವ ಉಪಗ್ರಹ ಇದು.

ಪ್ರತಿ ವರ್ಷ ಕನಿಷ್ಠ 5 ಸೂಕ್ಷ್ಮ ಉಪಗ್ರಹಗಳನ್ನು ಕಕ್ಷೆಗೆ ಉಡಾವಣೆ ಮಾಡುವ ಉದ್ದೇಶವಿದೆ. ಪ್ರತಿ ಉಪಗ್ರಹ ಸುಮಾರು 100 ಕೆ.ಜಿ ತೂಕವಿರಲಿದ್ದು, ಜೀವಿತಾವಧಿ 5 ವರ್ಷ ಆಗಿರುತ್ತದೆ. ಕಕ್ಷೆಯಲ್ಲಿ ಸುಮಾರು 50 ಉಪಗ್ರಹಗಳ ಮೇಲೆ ನಿಯಂತ್ರಣ ಹೊಂದುವವರೆಗೂ ಈ ಯತ್ನ ನಡೆಯಲಿದೆ ಎಂದು ಅವರು ಮ್ಯಾನ್ಮಾರ್ ಅಂತರಿಕ್ಷ ಎಂಜಿನಿಯರಿಂಗ್ ವಿಶ‍್ವವಿದ್ಯಾಲಯದ ಕೀ ತ್ವೈನ್‍ ಹೇಳುತ್ತಾರೆ.

‘ನಮ್ಮದೇ ಉಪಗ್ರಹ ಹೊಂದುವುದು ಮಿತವ್ಯಯಿಯೂ ಹೌದು’ ಎನ್ನುವ ಅವರು, ಈಗ ಉಪಗ್ರಹ ಉಡಾವಣೆಯು ಅಮರಿಕ, ರಷ್ಯಾ, ಚೀನಾದಂತ ದೊಡ್ಡ ರಾಷ್ಟ್ರಗಳಿಗಷ್ಟೇ ಸೀಮಿತವಾಗಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT