ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಸೆನೆಟ್‌ಗೆ ಭಾರತ ಮೂಲದ ವೈದ್ಯ ಸ್ಪರ್ಧೆ

Last Updated 29 ಜುಲೈ 2020, 7:06 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕ ಸೆನೆಟರ್ ಹುದ್ದೆಗೆ ಸ್ಪರ್ಧಿಸುತ್ತಿರುವುದು ವಿಶಿಷ್ಟವಾದ ಅನುಭವ ಎಂದು ಭಾರತ ಮೂಲದ ವೈದ್ಯ ಡಾ.ಮನೀಶ್ ಕುಮಾರ್ ಸೇಥ್ ಹೇಳಿದ್ದಾರೆ.

ಉದ್ಯೋಗ ಸೃಷ್ಟಿಸುವುದು, ವಲಸೆ ನೀತಿ ಸರಿಪಡಿಸುವುದು ಹಾಗೂ ಭಾರತದ ಜತೆ ಸಂಬಂಧ ಸುಧಾರಿಸುವುದು ಅವರ ಚುನಾವಣಾ ವಿಷಯಗಳಾಗಿವೆ.

ರಿಪಬ್ಲಿಕನ್ ಪಕ್ಷದ ಪ್ರಭಾವಿ ಸೆನೆಟರ್ ಟೆಡ್ ಕ್ರೂಸ್ ಅವರುಕಳೆದ ವಾರ ಪ್ರಾಥಮಿಕ ಚುನಾವಣೆಗೆ ಸೇಥ್ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದ್ದು ಮಾತ್ರವಲ್ಲದೆ, ಟೆನ್ನೆಸ್ಸಿಯಲ್ಲಿ ಪ್ರಚಾರ ಕೈಗೊಂಡಿದ್ದರು.

‘ಭಾರತವು ಅಮೆರಿಕದ ಅಭೂತಪೂರ್ವ ಪಾಲುದಾರ ದೇಶವಾಗಿದೆ. ಅಪ್ರತಿಮ ಮಿತ್ರದೇಶವೂ ಹೌದು. ಭಾರತ–ಅಮೆರಿಕ ಮೈತ್ರಿ ಎಂದಿಗೂ ಪ್ರಬಲವಾಗಿ ಇರಬೇಕು ಎಂದು ನಾನು ಬಯಸುತ್ತೇನೆ’ ಎಂದು ಸೇಥ್ ಹೇಳಿದ್ದಾರೆ.

ರಿಪಬ್ಲಿಕನ್ ಪಕ್ಷದ ಮತ್ತೊಬ್ಬ ಸ್ಪರ್ಧಿ ಬಿಲ್ ಹ್ಯಾಗರ್ಟಿ ಅವರ ಉಮೇದುವಾರಿಕೆಯನ್ನು ಡೊನಾಲ್ಡ್ ಟ್ರಂಪ್ ಹಾಗೂ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ಅನುಮೋದಿಸಿದ್ದಾರೆ. ಆದರೆ ಸೇಥ್ ಅವರು ಜನಮತಗಣನೆಯಲ್ಲಿ ಮುಂದಿದ್ದಾರೆ.

‘ಭಾರತ ಮೂಲದ ನನ್ನ ಪೋಷಕರು 1970ರ ದಶಕದಲ್ಲಿ ಉತ್ತಮ ಜೀವನವನ್ನು ಅರಸಿ ಅಮೆರಿಕಕ್ಕೆ ಬಂದಿದ್ದರು. ಇಬ್ಬರೂ ವೃತ್ತಿಯಲ್ಲಿ ವೈದ್ಯರು. ನಾನು ಒಹಿಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ಹುಟ್ಟಿದೆ. ಬಳಿಕ ಟೆನ್ನೆಸ್ಸಿಗೆ ಸ್ಥಳಾಂತರ ಆದೆವು’ ಎಂದು ಸೇಥ್ ಹೇಳಿದ್ದಾರೆ.

ಸೆನೆಟರ್ ಹುದ್ದೆಗೆ ಸ್ಪರ್ಧಿಸುತ್ತಿರುವುದು ತಮಗೆ ಸಿಕ್ಕಿರುವ ಅಪರೂಪದ ಅವಕಾಶ ಎಂದು ಸೇಥ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT