ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯುಎಚ್‌ಒ)ಹೊರ ಬರುವುದಾಗಿ ಈಗಾಗಲೇ ಘೋಷಿಸಿದ್ದ ಅಮೆರಿಕ, ಈ ಸಂಬಂಧ ಅಧಿಕೃತವಾಗಿ ವಿಶ್ವಸಂಸ್ಥೆಗೆ ಸೂಚನೆ ನೀಡಿದೆ.

ಕೊರೊನಾ ಸೋಂಕು ವಿಶ್ವದಲ್ಲಿ ವ್ಯಾಪಕವಾಗಿ ಹರಡುತ್ತಿದ್ದಾಗಲೂ, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರವಾಗಿಯೇ ನಿಂತಿತು. ಈ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ದಾರಿ ತಪ್ಪಿಸಿದ ಕಾರಣ ಜಗತ್ತಿನಲ್ಲಿ ಲಕ್ಷಾಂತರ ಜನರು ಸಾವನ್ನಪ್ಪಬೇಕಾಯಿತು ಎಂದು ಅಮೆರಿಕ ಆರೋಪಿಸಿತ್ತು.

‘ಮುಂದಿನ ವರ್ಷದ ಜುಲೈ 6ರಿಂದ ಅನ್ವಯವಾಗುವಂತೆ ಡಬ್ಲ್ಯೂಎಚ್‌ಒದಿಂದ ಹೊರ ನಡೆಯುವ ಬಗ್ಗೆ ಅಮೆರಿಕ ತನ್ನ ನಿರ್ಧಾರವನ್ನು ತಿಳಿಸಿದೆ. ಈ ಸಂಬಂಧ ಎಲ್ಲ ಷರತ್ತುಗಳನ್ನು ಪೂರೈಸಲಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಗಳ ವಕ್ತಾರ ಸ್ಟೀಫನ್ ದುಜಾರಿಕ್ ಹೇಳಿದ್ದಾರೆ.

ಸಂಸ್ಥೆಯಿಂದ ಹೊರ ನಡೆಯುವುದಾಗಿ ಏಪ್ರಿಲ್‌ನಲ್ಲಿಯೇ ಘೋಷಿಸಿದ್ದ ಅಮೆರಿಕ, ಆ ಸಮಯದಲ್ಲಿಯೇ ಹಣಕಾಸು ನೆರವನ್ನು ಸ್ಥಗಿತಗೊಳಿಸಿತ್ತು. ವಾರ್ಷಿಕ ₹3,375 ಕೋಟಿ (450 ಡಾಲರ್) ನೆರವನ್ನು ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದೆ. ಇದರ ಹತ್ತನೇ ಭಾಗದಷ್ಟು ಚೀನಾದ ಕೊಡುಗೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.