ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಸಂಘರ್ಷಕ್ಕಿಳಿದರೆ ಅಮೆರಿಕ ಸೇನೆ ಭಾರತದ ಪರ ನಿಲ್ಲಲಿದೆ: ಮಾರ್ಕ್‌ ಮಿಡೋವ್ಸ್

ಶ್ವೇತಭವನದ ಚೀಫ್‌ ಆಫ್‌ ಸ್ಟಾಫ್‌ ಮಾರ್ಕ್‌ ಮಿಡೋವ್ಸ್ ಹೇಳಿಕೆ
Last Updated 7 ಜುಲೈ 2020, 9:31 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಮತ್ತು ಚೀನಾ ನಡುವೆ ಸಂಘರ್ಷದ ಸಂದರ್ಭದಲ್ಲಿ ಅಮೆರಿಕದ ಸೇನೆ ಭಾರತದ ಪರ ನಿಲ್ಲಲಿದೆ ಎಂದು ಶ್ವೇತಭವನದ ಚೀಫ್‌ ಆಫ್‌ ಸ್ಟಾಫ್‌ ಮಾರ್ಕ್‌ ಮಿಡೋವ್ಸ್‌ ಹೇಳಿದ್ದಾರೆ.

ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ನೌಕಾಪಡೆಯ ಎರಡು ಯುದ್ಧನೌಕೆ‌ಗಳನ್ನು ನಿಯೋಜನೆ ಮಾಡಿದ ಸಂದರ್ಭದಲ್ಲಿಯೇ ಮಾರ್ಕ್‌ ಅವರು ಈ ಹೇಳಿಕೆಗೆ ಮಹತ್ವ ಬಂದಿದೆ.

‘ನಮ್ಮ ನಿಲುವು, ಸಂದೇಶ ಸ್ಪಷ್ಟವಾಗಿದೆ. ಚೀನಾ ಅಥವಾ ಇತರ ಯಾವುದೇ ದೇಶವಾಗಲಿ ದಕ್ಷಿಣ ಚೀನಾ ಸಮುದ್ರ ಇಲ್ಲವೇ ಇತರ ಪ್ರದೇಶಗಳಲ್ಲಿ ತಮ್ಮ ಪ್ರಾಬಲ್ಯ ಪ್ರದರ್ಶನಕ್ಕೆ ಮುಂದಾದರೆ ನಾವು ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ’ ಎಂದು ಅವರು ’ಫಾಕ್ಸ್‌ ನ್ಯೂಸ್‌’ ‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಚೀನಾಕ್ಕೆ ಸಂಬಂಧಿಸಿದ ಹಲವು ಮಹತ್ವದ ಆದೇಶಗಳಿಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಂಕಿತ ಹಾಕಲಿದ್ದಾರೆ’ ಎಂಬ ಸುಳಿವನ್ನೂ ಅವರು ಈ ಸಂದರ್ಭದಲ್ಲಿ ನೀಡಿದರು.

‘ಚೀನಾದಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಸ್ಥಳಾಂತರ ಮಾಡುವುದು, ಆ ಮೂಲಕ ಅಮೆರಿಕದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಮಹತ್ವದ ನಿರ್ಣಯವೂ ಇದರಲ್ಲಿ ಸೇರಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT