ಜೀವನಾಂಶ ಕೊಡದಿದ್ದಕ್ಕೆ ಯುವಕ ಆತ್ಮಹತ್ಯೆ

ಸೋಮವಾರ, ಮೇ 20, 2019
30 °C

ಜೀವನಾಂಶ ಕೊಡದಿದ್ದಕ್ಕೆ ಯುವಕ ಆತ್ಮಹತ್ಯೆ

Published:
Updated:

ಬೆಂಗಳೂರು: ಜೀವನಾಂಶ ಕೊಡದ ತಂದೆಯ ವಿರುದ್ಧ ಬೇಸರಗೊಂಡು ಎಂ.ಸುನೀಲ್ (32) ಎಂಬುವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!

ಜೆ.ಸಿ.ನಗರ ಸಮೀಪದ ಕುರುಬರಹಳ್ಳಿ ನಿವಾಸಿಯಾದ ಸುನೀಲ್, ಮಂಗಳವಾರ ರಾತ್ರಿ 9.30ರ ಸುಮಾರಿಗೆ ಎಂಇಎಸ್ ರಸ್ತೆಯಲ್ಲಿ ವಿಷ ಕುಡಿದಿದ್ದರು. ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಅವರನ್ನು, ಸ್ಥಳೀಯರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದರು.

ಚಿಕಿತ್ಸೆಗೆ ಸ್ಪಂದಿಸದೆ ಅದೇ ದಿನ ರಾತ್ರಿ ಕೊನೆಯುಸಿರೆಳೆದರು.

ಈ ಸಂಬಂಧ ಜಾಲಹಳ್ಳಿ ಠಾಣೆಗೆ ದೂರು ಕೊಟ್ಟಿರುವ ಮೃತರ ತಾಯಿ ಶಾಂತಮ್ಮ, ‘ಪತಿ ಮಲ್ಲೇಶ್, 30 ವರ್ಷಗಳ ಹಿಂದೆ ನನ್ನನ್ನು ಬಿಟ್ಟು ಬೇರೊಬ್ಬಳನ್ನು ವಿವಾಹವಾದರು. ವಿಚ್ಛೇದನ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ‘ಪತ್ನಿಗೆ ಪ್ರತಿ ತಿಂಗಳು ಜೀವನಾಂಶ ಕೊಡಬೇಕು’ ಎಂದು ಆದೇಶಿಸಿತ್ತು. ಆದರೆ, ಮಲ್ಲೇಶ್ ಸರಿಯಾಗಿ ಜೀವನಾಂಶ ಕೊಡದೆ ಮೋಸ ಮಾಡಿದ್ದರು’ ಎಂದು ಆರೋಪಿಸಿದ್ದಾರೆ.

‘ಜೀವನಾಂಶದ ವಿಚಾರವಾಗಿ ನನ್ನ ಮಗ ಹಾಗೂ ಮಲ್ಲೇಶ್ ನಡುವೆ ಆಗಾಗ್ಗೆ ಗಲಾಟೆ ಆಗುತ್ತಲೇ ಇತ್ತು. ಮಾರ್ಚ್ 18ರಂದು ಸಹ ಮಗ ವಿಷ ಕುಡಿದಿದ್ದ. ಆಗ ಚೇತರಿಸಿಕೊಂಡಿದ್ದ ಆತ, ಮಂಗಳವಾರ ರಾತ್ರಿ ಮತ್ತೆ ವಿಷ ಸೇವಿಸಿದ್ದ. ಆದರೆ, ಈ ಬಾರಿ ಬದುಕುಳಿಯಲಿಲ್ಲ. ಮಗನ ಆತ್ಮಹತ್ಯೆಗೆ ಕಾರಣರಾದ ಮಲ್ಲೇಶ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 4

    Happy
  • 0

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !