ಶುಕ್ರವಾರ, ಸೆಪ್ಟೆಂಬರ್ 24, 2021
23 °C
ಲಾಹೋರ್: ಸೂಫಿ ದೇವಾಲಯದ ಬಳಿ ಘಟನೆ

ಆತ್ಮಾಹುತಿ ದಾಳಿ: 10 ಮಂದಿ ಸಾವು

ಎಎಫ್‌ಪಿ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಲಾಹೋರ್‌: ಇಲ್ಲಿನ ಹಳೆಯ ಹಾಗೂ ಪ್ರಸಿದ್ಧ ಸೂಫಿ ಮಂದಿರದ ಹೊರಗೆ ಬುಧವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 10 ಮಂದಿ ಮೃತಪಟ್ಟಿದ್ದು. 24 ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ಹೊಣೆಯನ್ನು ತಾಲಿಬಾನ್‌ ಹೊತ್ತುಕೊಂಡಿದೆ.

ಮೂವರು ಪೊಲೀಸರು, ಇಬ್ಬರು ಕಾವಲುಗಾರರು, ಮಗು ಸೇರಿದಂತೆ ಐವರು ನಾಗರಿಕರು ಮೃತರಲ್ಲಿ ಸೇರಿದ್ದಾರೆ ಎಂದು ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್‌ ಬುಸ್ದರ್‌ ಹೇಳಿದ್ದಾರೆ.

ಮಹಿಳೆಯರಿಗಾಗಿ ಮೀಸಲಿರುವ ಮಂದಿರದ ಪ್ರವೇಶ ದ್ವಾರದ ಬಳಿ ದಾಳಿ ಮಾಡಲಾಗಿದೆ. ಮಂದಿರದ ಹೊರಗಡೆ ಇದ್ದ ಸಶಸ್ತ್ರ ಪಡೆಯನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮೊಹಮ್ಮದ್‌ ಅಶ್ರಫ್‌ ಸುದ್ದಿಗೋಷ್ಠಿ
ಯಲ್ಲಿ ತಿಳಿಸಿದರು.

ಕಾರ್‌ ಬಾಂಬ್ ದಾಳಿ

ಕಾಬೂಲ್‌: ಅಂತರರಾಷ್ಟ್ರೀಯ ನೆರವು ತಂಡವನ್ನು ಗುರಿಯಾಗಿರಿಸಿಕೊಂಡು ದುಷ್ಕರ್ಮಿಗಳು ಕಾರ್‌ ಬಾಂಬ್‌ ದಾಳಿ ನಡೆಸಿದ್ದು 20ಕ್ಕೂ ಅಧಿಕ ಜನರು ಗಾಯಗೊಂಡಿ ದ್ದಾರೆ. ತಾಲಿಬಾನ್‌ ಉಗ್ರರು ಈ ದಾಳಿ ಹೊಣೆ ಹೊತ್ತಿದ್ದಾರೆ.

ಕಾಬೂಲ್‌ನಲ್ಲಿ ಸಂವಹನ ಸಚಿವಾಲಯದ ಮೇಲೆ ದಾಳಿ ನಡೆದ ಎರಡನೇ ವಾರದ ಅಂತರದಲ್ಲಿ ಈ ದಾಳಿ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.