ಚಾಮರಾಜನಗರ: ಸುಳ್ವಾಡಿ ದುರಂತ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ಅಂಬಿಕಾ ಅವರು ರಾಜಕೀಯದಲ್ಲಿ ಹೆಸರು ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು. ಮಾರಮ್ಮ ದೇವಸ್ಥಾನದ ಆಡಳಿತವು ಸ್ವಾಮೀಜಿ ಹಾಗೂ ಪತಿ ಮಾದೇಶ ಅವರ ಹಿಡಿತಕ್ಕೆ ಸಿಕ್ಕಿದರೆ, ಅಲ್ಲಿನ ಆದಾಯವನ್ನು ಬಳಸಿಕೊಂಡು ರಾಜಕೀಯವಾಗಿ ಮೇಲೆ ಬರಬಹುದು ಎಂದು ಯೋಚಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಅಂಬಿಕಾ ಅವರು ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಯತ್ನಿಸಿದ್ದರು. ಆದರೆ, ಚುನಾವಣಾ ಖರ್ಚಿಗೆ ಬೇಕಾದಷ್ಟು ಹಣ ಇಲ್ಲದಿರುವುದರಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿರಲಿಲ್ಲ.

ರಾಜಕೀಯದಲ್ಲಿ ಮುಂದೆ ಬರಲು ಧನ ಬಲ ಬೇಕು ಎಂಬುದನ್ನು ಅರ್ಥಮಾಡಿಕೊಂಡಿದ್ದ ಅಂಬಿಕಾ, ಮಾರಮ್ಮನ ದೇವಾಲಯದ ಮೂಲಕ ಅದನ್ನು ಸಂಪಾದಿಸಬಹುದು ಎಂದುಕೊಂಡಿದ್ದರು. ಅದಕ್ಕೆ, ಪತಿ ಮಾದೇಶ ಅವರು ಟ್ರಸ್ಟಿ ಆಗಬೇಕು. ಸ್ಥಳೀಯವಾಗಿ ಪ್ರಭಾವಿ ಆಗಿರುವ ಚಿನ್ನಪ್ಪಿ ಜಾಗದಲ್ಲಿ ಮಾದೇಶ ಅವರನ್ನು ಕೂರಿಸಬೇಕು ಎಂಬ ಲೆಕ್ಕಾಚಾರ ಅವರದಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

12 ವರ್ಷಗಳ ಪರಿಚಯ: ಒಂದೇ ಊರಿನವರು ಮತ್ತು ದೂರದ ಸಂಬಂಧಿಗಳಾಗಿದ್ದ ಇಮ್ಮಡಿ ಮಹಾದೇವಸ್ವಾಮಿ ಹಾಗೂ ಅಂಬಿಕಾ 2006ರಲ್ಲಿ ಪರಸ್ಪರ ಸಂಪರ್ಕಕ್ಕೆ ಬರುತ್ತಾರೆ. ಆ ವೇಳೆಗಾಗಲೇ ಅಂಬಿಕಾ, ಮಾದೇಶ ಅವರನ್ನು ವರಿಸಿದ್ದರು. ಆರಂಭದಲ್ಲಿ ಮಾದೇಶ ಅವರಿಗೆ ಮಾರಮ್ಮ ದೇವಸ್ಥಾನದಲ್ಲಿದ್ದ ಕೊಠಡಿಗಳನ್ನು ನಿರ್ವಹಿಸುವ ಕೆಲಸ ವಹಿಸಲಾಗಿತ್ತು. ಆಗ ಮಹದೇವು ಎಂಬುವವರು ದೇವಾಲಯದ ವ್ಯವಸ್ಥಾಪಕರಾಗಿದ್ದರು ಎಂದು ತಿಳಿದು ಬಂದಿದೆ.

ಈ ಅವಧಿಯಲ್ಲಿ ಸ್ವಾಮೀಜಿ ಹಾಗೂ ಅಂಬಿಕಾ ನಡುವಿನ ‘ಆತ್ಮೀಯತೆ’ ಇನ್ನಷ್ಟು ಹೆಚ್ಚಿತ್ತು. ಕೆಲ ಸಮಯದ ನಂತರ ಸ್ವಾಮೀಜಿ ಅವರು ಮಾದೇಶ ಅವರನ್ನು ವ್ಯವಸ್ಥಾಪಕ ಹುದ್ದೆಗೆ ನಿಯೋಜಿಸಿದ್ದರು.

ಟ್ರಸ್ಟ್ ರಚನೆ ಆಗುವವರೆಗೂ ದೇವಾಲಯದ ಹಣಕಾಸಿನ ವ್ಯವಹಾರಗಳೆಲ್ಲವೂ ಅಧ್ಯಕ್ಷರಾಗಿದ್ದ ಇಮ್ಮಡಿ ಮಹಾದೇವಸ್ವಾಮಿ ಅವರ ನಿಯಂತ್ರಣದಲ್ಲಿತ್ತು. ಅವರು ಅಗತ್ಯ ಬಿದ್ದಾಗಲೆಲ್ಲಾ ಅಂಬಿಕಾಗೆ ಹಣ ಕೊಡುತ್ತಿದ್ದರು. ಆದರೆ, ಟ್ರಸ್ಟ್ ನೋಂದಣಿಯಾದ ಬಳಿಕ ಹಣಕಾಸು ವ್ಯವಹಾರದ ಮೇಲಿನ ಹಿಡಿತ ತಪ್ಪಿತ್ತು. ಹಣದ ಹರಿವು ಬತ್ತಿ ಹೋಗಿತ್ತು ಎಂದು ಮೂಲಗಳು ಹೇಳಿವೆ.

ಟ್ರಸ್ಟ್ ಸದಸ್ಯರಾಗಿದ್ದ ಚಿನ್ನಪ್ಪಿ ಅವರು ಸ್ಥಳೀಯರಾಗಿದ್ದು, ಊರಿನ ಪ್ರಭಾವಿ ವ್ಯಕ್ತಿ. ಸಮಾಜದಲ್ಲಿ ಅವರಿಗೆ ಉತ್ತಮ ಹೆಸರೂ ಇದೆ. ಸ್ವಾಮೀಜಿ ಅವರ ಕೆಲವು ಯೋಜನೆಗಳಿಗೆ ಚಿನ್ನಪ್ಪಿ ಹಾಗೂ ಇತರ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿದ್ದರು. ಇದು ಸ್ವಾಮೀಜಿ ಬಣಕ್ಕೆ ಇಷ್ಟವಾಗಿರಲಿಲ್ಲ.

ಮಾದೇಶ ಟ್ರಸ್ಟಿಯಾದರೆ ತನಗೆ ಅನುಕೂಲವಾಗಲಿದೆ. ಸ್ವಾಮೀಜಿ ಮೂಲಕ ಆಡಳಿತ ಮಂಡಳಿಗೆ ಅವರನ್ನು ಸೇರ್ಪಡೆಗೊಳಿಸಬೇಕು ಎಂಬುದು ಅಂಬಿಕಾ ಲೆಕ್ಕಾಚಾರ ಆಗಿತ್ತು. ಆದರೆ, ಟ್ರಸ್ಟಿ ಹುದ್ದೆ ಖಾಲಿ ಇರಲಿಲ್ಲ. ಚಿನ್ನಪ್ಪಿ ಅವರನ್ನು ಟ್ರಸ್ಟಿ ಸ್ಥಾನದಿಂದ ಕೆಳಗಿಳಿಸಿದರೆ, ಆ ಜಾಗದಲ್ಲಿಮಾದೇಶ ಅವರನ್ನು ಕೂರಿಸಬಹುದು ಎಂದು ಅಂಬಿಕಾ ಯೋಚಿಸಿದ್ದರು ಎಂದು ಗೊತ್ತಾಗಿದೆ.

‘ಸ್ವಾಮೀಜಿ ಹಾಗೂ ಮಾದೇಶ ಅವರ ಮೂಲಕ ಮತ್ತೆ ದೇವಾಲಯವನ್ನು ಹಿಡಿತಕ್ಕೆ ತೆಗೆದುಕೊಂಡರೆ, ದೇವಾಲಯದ ಚಿನ್ನ, ಆದಾಯ ತಮ್ಮದಾಗುತ್ತದೆ. ಇದನ್ನು ರಾಜಕಾರಣ ಮಾಡಲು ಬಳಸಬಹುದು ಎಂಬ ಅಂಬಿಕಾ ಅವರ ದುರಾಲೋಚನೆ ಪೈಶಾಚಿಕ ಕೃತ್ಯಕ್ಕೆ ಕಾರಣವಾಯಿತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಂಭೀರ ಪ್ರಕರಣ ಕಾರಣಕ್ಕೆ ಮೈಸೂರು ಜೈಲಿಗೆ: ಎಸ್ಪಿ

ನಾಲ್ವರು ಆರೋಪಿಗಳನ್ನು ಮೈಸೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲು ಕಾರಣ ಏನು ಎಂಬುದಕ್ಕೆ ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ ಅವರು, ‘ಚಾಮರಾಜನಗರ ಕಾರಾಗೃಹದಲ್ಲಿ ಹೆಚ್ಚು ಕೊಠಡಿಗಳಿಲ್ಲ, ಮಹಿಳೆಯರನ್ನು ಇರಿಸಿಕೊಳ್ಳುವ ವ್ಯವಸ್ಥೆ ಇಲ್ಲ. ಸ್ವಾಮೀಜಿ ಮತ್ತು ಮಾದೇಶ ಅವರಿಗೆ ಅಧಿಕ ರಕ್ತದೊತ್ತಡ ಇತ್ತು. ತುರ್ತು ಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ ನೀಡುವುದು ಕಷ್ಟವಾಗಬಹುದು. ಅದಲ್ಲದೇ, ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಅವರನ್ನು ಮೈಸೂರು ಕಾರಾಗೃಹದಲ್ಲಿ ಇರಿಸಲು ನಿರ್ಧರಿಸಲಾಯಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.