ಸುಷ್ಮಾ ಸ್ವರಾಜ್‌ – ಕಜಕಿಸ್ತಾನದ ವಿದೇಶಾಂಗ ಸಚಿವ ಕೈರಾತ್ ಮಾತುಕತೆ

7

ಸುಷ್ಮಾ ಸ್ವರಾಜ್‌ – ಕಜಕಿಸ್ತಾನದ ವಿದೇಶಾಂಗ ಸಚಿವ ಕೈರಾತ್ ಮಾತುಕತೆ

Published:
Updated:
Deccan Herald

ಅಸ್ತಾನ: ಮೂರು ದೇಶಗಳ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಶುಕ್ರವಾರ ಕಜಕಿಸ್ತಾನದ ವಿದೇಶಾಂಗ ಸಚಿವ ಕೈರಾತ್ ಅಬ್ದುರಖ್ಮನೊವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

‌ವ್ಯಾಪಾರ, ಹೂಡಿಕೆ, ಇಂಧನ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಸುಷ್ಮಾ ಅವರು ಕೈರಾತ್‌ ಜೊತೆ ಚರ್ಚೆ ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಸುಷ್ಮಾ ಅವರು ಕಜಕಿಸ್ತಾನದಲ್ಲಿರುವ ಭಾರತೀಯರ ಜೊತೆ ಸಂವಾದ ನಡೆಸಿದ್ದಾರೆ. ಕಿರ್ಗಿಸ್ತಾನ ಹಾಗೂ ಉಜ್ಬೇಕಿಸ್ತಾನಕ್ಕೂ ಅವರು ಭೇಟಿ ನೀಡಲಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !