ಚಿತ್ರಹಿಂಸೆ ಆರೋಪದ ಬಳಿಕ ಪತ್ನಿಯಿಂದ ವಿಚ್ಛೇದನ ಕೋರಿದ ಸಚಿವ
ಲಖನೌ:’ಪತಿ ‘ಚಿತ್ರಹಿಸೆ‘ ಮತ್ತು ’ಕಿರುಕುಳ‘ ನೀಡುತ್ತಿದ್ದಾರೆ‘ ಎಂದು ಉತ್ತರ ಪ್ರದೇಶದ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ ತನ್ನ ಪತಿ ಬಾಬುರಾಮ್ ನಿಷಾದ್ ವಿರುದ್ಧ ಪತ್ನಿ ಆರೋಪ ಮಾಡಿದ್ದು, ಈಗ ಆ ಸಚಿವ ಪತ್ನಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಬಾಬುರಾಮ್ ನಿಷಾದ್ ಅವರು ಉತ್ತರ ಪ್ರದೇಶದ ಹಿಂದುಳಿದ ವರ್ಗದ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದು, ರಾಜ್ಯ ಸಚಿವ ಸ್ಥಾನಮಾನ ಹೊಂದಿದ್ದಾರೆ. ಅವರು, ಹಮೀದ್ಪುರ ಜಿಲ್ಲೆಯ ನ್ಯಾಯಾಲಯಕ್ಕೆ ಬುಧವಾರ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.Last Updated 27 ಸೆಪ್ಟೆಂಬರ್ 2019, 12:39 IST