ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯುವುದು
Published 3 ಅಕ್ಟೋಬರ್ 2023, 23:30 IST
ಪ್ರಜಾವಾಣಿ ವಿಶೇಷ
author
ಮೇಷ
ವ್ಯವಹಾರಗಳಲ್ಲಿ ಜಯವಿದ್ದು ದೊಡ್ಡ ಕಂಪನಿಯೊಂದಿಗೆ ಪಾಲುದಾರಿಕೆಯ ಅವಕಾಶ ಸಿಗಲಿದೆ. ನಿಮ್ಮ ಸರಳ ಸ್ವಭಾವ ಇತರರು ದುರುಪಯೋಗಪಡಿಸಿಕೊಳ್ಳದಂತೆ ಜಾಗ್ರತೆ ವಹಿಸಿ. ಆಭರಣಗಳ ಖರೀದಿ ನಡೆಯಲಿದೆ.
ವೃಷಭ
ಸಹಭಾಗಿಗೆ ಅಥವಾ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಈ ದಿನ ಹೆಚ್ಚು ಆನಂದ ಸಿಗಬಹುದು . ಸರ್ಕಾರಿ ಪತ್ರಗಳಿಗೆ ಸಂಬಂಧಿಸಿದಂತೆ ಪ್ರಾರಂಭಿಸಿದ್ದ ಕಾರ್ಯಗಳು ಈ ದಿನ ಪೂರ್ಣಗೊಳ್ಳುತ್ತವೆ.
ಮಿಥುನ
ಮಾತೃವರ್ಗದವರ ಸಹಾಯದಿಂದ ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯುವುದು. ಸಂಸಾರದ ವಿಚಾರದಲ್ಲಿ , ಉದ್ಯೋಗದಲ್ಲಿ ದೃಢಚಿತ್ತದಿಂದ ಮುಂದುವರಿಯಿರಿ. ಮಕ್ಕಳ ಮನರಂಜನೆಗೆ ಖರ್ಚು ಸಂಭವಿಸುವುದು.
ಕರ್ಕಾಟಕ
ಮರ ಕೆತ್ತನೆಯ ಕೆಲಸಗಾರರಿಗೆ, ಕಟ್ಟಡ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಇರಲಿದೆ. ಸಾಲ ತೀರಿಸಲು ಹೊಸದೊಂದು ಮಾರ್ಗ ಕಾಣಲಿದೆ. ಇಂದು ಒಬ್ಬ ತಪಶ್ಶಕ್ತಿ ಹೊಂದಿರುವವರ ಅನುಗ್ರಹಕ್ಕೆ ಪಾತ್ರರಾಗುವಿರಿ.
ಸಿಂಹ
ತಾಯಿಯವರ ದೇಹಾರೋಗ್ಯ ತಪಾಸಣೆ ನಡೆಸಲು ವೈದ್ಯರ ಬಳಿ ಹೋಗುವಿರಿ. ವೃತ್ತಿ ಬದುಕಿನಲ್ಲಿ ಅಭಿಪ್ರಾಯಗಳಿಗೆ ಹೆಚ್ಚಿನ ವಿರೋಧ ಬರಲಿದೆ. ಮಾನಹಾನಿಯ ಸಾಧ್ಯತೆಗಳೂ ಇರಬಹುದು.
ಕನ್ಯಾ
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಂಡು ಕನಸುಗಳನ್ನು ಸಾಕಾರಗೊಳಿಸುವುದಕ್ಕಾಗಿ ಅವಿಶ್ರಾಂತವಾಗಿ ದುಡಿಯುವಿರಿ. ಕೌಟುಂಬಿಕ ವಿಚಾರಗಳತ್ತ ಸಂಪೂರ್ಣ ಗಮನ ನೀಡಿ.
ತುಲಾ
ನೀವು ಕೈಗೊಳ್ಳಲಿರುವ ನಿರ್ಧಾರಗಳು ಮನೆಯವರಿಗೆ ಅಗತ್ಯವಾಗಿ ತಿಳಿದಿರಲಿ. ಬಹಳಷ್ಟು ಅನುಕೂಲಕರ ಫಲಗಳನ್ನು ನಿಮಗೆ ಈ ದಿನದಲ್ಲಿನ ಶುಭ ಸಂದರ್ಭವು ತರಲಿದೆ.
ವೃಶ್ಚಿಕ
ಪ್ರಮುಖ ನಿರ್ಧಾರಗಳನ್ನು ಆತುರವಾಗಿ ತೆಗೆದುಕೊಳ್ಳುವ ಸನ್ನಿವೇಶಕ್ಕೆ ಸಿಕ್ಕಿಕೊಂಡಂಥ ಸಮಯ ಬರಬಹುದು. ಭವಿಷ್ಯದ ಯೋಜನೆಯಲ್ಲಿ ಪಾಲುದಾರಿಕೆಯು ಹಂತ ಹಂತವಾಗಿ ಲಾಭ ತರಲಿದೆ. ಯಶಸ್ಸು ಕಾಣುವಿರಿ.
ಧನು
ಶೈಕ್ಷಣಿಕ ರಂಗದಲ್ಲಿ ಚಟುವಟಿಕೆಗಳಿಂದ ಉತ್ತಮ ಹೆಸರನ್ನು ಸಂಪಾದಿಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದಿದ್ದಲ್ಲಿ ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ. ಸಂತೋಷ ಕೂಟದಲ್ಲಿ ಭಾಗವಹಿಸುವಿರಿ.
ಮಕರ
ಪ್ರಭಾವಿ ವ್ಯಕ್ತಿಯೊಬ್ಬರಿಂದ ಕಾರ್ಯವನ್ನು ಸಾಧಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಕಷ್ಟಗಳನ್ನು ಎದುರಿಸುವ ಉತ್ತಮ ಎದೆಗಾರಿಕೆಯನ್ನು ಹೊಂದಿರುವಿರಿ. ಸಾಮಾಜಿಕವಾಗಿ ಜನೋಪಕಾರದಿಂದ ಶ್ಲಾಘನೆ ಲಭಿಸಲಿದೆ.
ಕುಂಭ
ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹೆಚ್ಚಿನ ಕೆಲಸವಿದ್ದು ಕೆಲಸಗಾರರಲ್ಲಿ ಹುರುಪು ಮೂಡಿಸುವಲ್ಲಿ ಯಶಸ್ವಿಯಾಗುವಿರಿ. ನೆಂಟರ ಸಹಾಯದಿಂದ ಮಗಳ ಮದುವೆ ಗೊತ್ತಾಗಿ ಮುಂದಿನ ತಯಾರಿ ಮಾಡಿಕೊಳ್ಳುವಿರಿ.
ಮೀನ
ನಿಮ್ಮದಲ್ಲದ ವಸ್ತುವಿನ ಬಗ್ಗೆ ಯಾವುದೇ ರೀತಿಯ ವ್ಯಾಮೋಹ ಇಟ್ಟುಕೊಳ್ಳಬೇಡಿ. ಕೆಲವೊಂದು ಅನಿರೀಕ್ಷಿತ ಘಟನೆಗಳಿಂದ ವ್ಯವಹಾರವು ಉತ್ತಮಗೊಳ್ಳುವುದು. ಕೃಷಿಕರಿಗೆ ಧಾನ್ಯ ಮಾರಾಟಕ್ಕೆ ಒಳ್ಳೆಯ ದಿನ.