ಗುರುವಾರ, 30 ಅಕ್ಟೋಬರ್ 2025
×
ADVERTISEMENT

Sportsmanship

ADVERTISEMENT

ಸಂಗತ | ಸಜ್ಜನಿಕೆ ನೇಪಥ್ಯಕ್ಕೆ, ತುಡುಗುತನ ಮುನ್ನೆಲೆಗೆ!

India Pakistan Rivalry: ಕ್ರಿಕೆಟ್‌ ಸಜ್ಜನರ ಆಟವಾಗಿ ಈಗ ಉಳಿದಂತಿಲ್ಲ. ಪಾಕಿಸ್ತಾನದ ಆಟಗಾರರ ಉದ್ಧಟತನದ ನಡವಳಿಕೆಯಲ್ಲಂತೂ ಕ್ರೀಡಾಸ್ಫೂರ್ತಿಯ ಲವಲೇಶವೂ ಇಲ್ಲ.
Last Updated 26 ಸೆಪ್ಟೆಂಬರ್ 2025, 0:30 IST
ಸಂಗತ | ಸಜ್ಜನಿಕೆ ನೇಪಥ್ಯಕ್ಕೆ, ತುಡುಗುತನ ಮುನ್ನೆಲೆಗೆ!

ಈಶ ಗ್ರಾಮೋತ್ಸವ: ಬಡಗನ್ನೂರು ತಂಡಕ್ಕೆ ಪ್ರಶಸ್ತಿ

Rural Sports Festival: ದಕ್ಷಿಣ ಕನ್ನಡ ಜಿಲ್ಲೆಯ ಬಡಗನ್ನೂರು ತಂಡವು ಕೊಯಮತ್ತೂರಿನಲ್ಲಿ ಮುಕ್ತಾಯಗೊಂಡ ಈಶ ಗ್ರಾಮೋತ್ಸವದ ಮಹಿಳೆಯರ ಥ್ರೋಬಾಲ್‌ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದು ಕರ್ನಾಟಕದ ಕ್ರೀಡಾ ಪಾರಮ್ಯ ತೋರಿಸಿತು.
Last Updated 22 ಸೆಪ್ಟೆಂಬರ್ 2025, 23:48 IST
ಈಶ ಗ್ರಾಮೋತ್ಸವ: ಬಡಗನ್ನೂರು ತಂಡಕ್ಕೆ ಪ್ರಶಸ್ತಿ

ಅಂಗವೈಕಲ್ಯ ಮೆಟ್ಟಿ ನಿಂತ ಕ್ರೀಡಾ ಸಾಧಕಿ

ಕಮಲಾಕ್ಷಿ ಹೈದರಾಬಾದ್‌ನಲ್ಲಿ ವ್ಹೀಲ್ ಚೇರ್ ಲಾನ್‌ ಟೆನಿಸ್ ಕೂಡ ಆಡಿದ್ದಾರೆ. ಒಂದು ಕೈಯಲ್ಲಿ ಬ್ಯಾಟ್ ಹಿಡಿದು ಇನ್ನೊಂದು ಕೈಯಲ್ಲಿ ಕುರ್ಚಿ ಗಾಲಿಯನ್ನು ತಳ್ಳುತ್ತಾ ಆಡುವ ಆಟವಿದು. ವ್ಹೀಲ್ ಚೇರ್ ಬ್ಯಾಡ್ಮಿಂಟನ್ ಸಹ ಆಡುತ್ತಾರೆ.
Last Updated 12 ಫೆಬ್ರುವರಿ 2021, 19:31 IST
ಅಂಗವೈಕಲ್ಯ ಮೆಟ್ಟಿ ನಿಂತ ಕ್ರೀಡಾ ಸಾಧಕಿ

ಮೂಡಲಗಿ: ಬೀಸನಕೊಪ್ಪದ ಯಮನಪ್ಪ ‘ಕ್ರೀಡಾ ರತ್ನ’

ಗುಂಡು ಕಲ್ಲು ಎತ್ತುವುದರಲ್ಲಿ ಸಾಧನೆ
Last Updated 3 ನವೆಂಬರ್ 2020, 14:44 IST
ಮೂಡಲಗಿ: ಬೀಸನಕೊಪ್ಪದ ಯಮನಪ್ಪ ‘ಕ್ರೀಡಾ ರತ್ನ’

‘ಈ ಕಾರಣಕ್ಕಾಗಿ ನಾನು ಆತನನ್ನು ವಿರೋಧಿಸುವೆ’: ವಿರಾಟ್ ವಿರುದ್ಧ ನೆಟ್ಟಿಗರ ಕಿಡಿ

ಭಾರತ ಕ್ರಿಕೆಟ್‌ ತಂಡ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕರಾಗಿರುವ ವಿರಾಟ್‌ ಕೊಹ್ಲಿ ಅವರು ಕ್ರೀಡಾಂಗಣದಲ್ಲಿ ತಮ್ಮ ಅಮೋಘವಾದ ಬ್ಯಾಟಿಂಗ್‌ ಶೈಲಿಯ ಜೊತೆಜೊತೆಗೆ ಆಕ್ರಮಣಕಾರಿ ನಡೆಯಿಂದಲೂ ಗುರುತಿಸಿಕೊಳ್ಳುತ್ತಾರೆ. ಬುಧವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದ ವೇಳೆ ಕೊಹ್ಲಿ ತೋರಿದ ಅಂತಹದೊಂದು ವರ್ತನೆಯ ವಿರುದ್ಧ ನೆಟ್ಟಿಗರು ಟೀಕಾಪ್ರಹಾರ ಮಾಡಿದ್ದಾರೆ. ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಬುಧವಾರ ಸೆಣಸಾಟ ನಡೆಸಿದ್ದವು. ಈ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ, ನಿಗದಿತ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡು 164 ರನ್‌ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಮುಂಬೈ ತಂಡ 5 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ 166 ರನ್‌ ಗಳಿಸಿ ಜಯದ ನಗೆ ಬೀರಿತ್ತು. ಕೆಣಕಲು ಹೋದ ವಿರಾಟ್! ಪ್ಲೇ ಆಫ್‌ನತ್ತ ಸಾಗಲು ಮಹತ್ವವೆನಿಸಿದ್ದ ಈ ಪಂದ್ಯದಲ್ಲಿ 165 ರನ್‌ ಗುರಿ ಎದುರು ಇನಿಂಗ್ಸ್ ಆರಂಭಿಸಿದ ಮುಂಬೈ ತಂಡ 13 ಓವರ್‌ಗಳಲ್ಲಿ 99 ರನ್‌ ಗಳಿಸಿತ್ತು. ಅದಾಗಲೇ ಪ್ರಮುಖ ಮೂರು ವಿಕೆಟ್‌ಗಳು ಉರುಳಿದ್ದವು. ಆದರೆ, ಕೇವಲ 25 ಎಸೆತಗಳನ್ನು ಎದುರಿಸಿ 40 ರನ್ ಗಳಿಸಿ ಆಡುತ್ತಿದ್ದ ಸೂರ್ಯಕುಮಾರ್‌ ಯಾದವ್‌ ಆರ್‌ಸಿಬಿಗೆ ತಲೆನೋವಾಗಿದ್ದರು. ಡೇಲ್‌ ಸ್ಟೇಯ್ನ್‌ ಎಸೆದ 13ನೇ ಓವರ್‌ನ ಎರಡು, ಮೂರು ಮತ್ತು ಐದನೇ ಎಸೆತವನ್ನು ಬೌಂಡರಿಗಟ್ಟಿದ್ದ ಯಾದವ್‌, ಕೊನೆಯ ಎಸೆತವನ್ನು ರಕ್ಷಣಾತ್ಮಕವಾಗಿ ಆಡಿದ್ದರು. ಸಿಲ್ಲಿ ಮಿಡ್‌ಆಫ್‌ನಲ್ಲಿ ನಿಂತಿದ್ದ ಕೊಹ್ಲಿ ಚೆಂಡನ್ನು ಹಿಡಿದು,ಯಾದವ್‌ ಅವರನ್ನೇ ದಿಟ್ಟಿಸಿ ನೋಡುತ್ತಾ ಬಳಿಗೆ ಬಂದರು.ಯಾದವ್‌ ಕೂಡ ಕೊಹ್ಲಿಯನ್ನೇ ನೋಡುತ್ತ ಇಂದಿಂಚೂ ಕದಲದೆ ನಿಂತರು. ಇಬ್ಬರ ನಡುವೆ ಯಾವುದೇ ಮಾತುಕತೆ ನಡೆದಿಲ್ಲವಾದರೂ, ಯಾದವ್‌ರನ್ನು ಕೆಣಕಲು ಕೊಹ್ಲಿ ಈ ರೀತಿ ಮಾಡಿದರು ಎಂಬ ಟೀಕೆಗಳು ವ್ಯಕ್ತವಾಗಿವೆ. ಪಂದ್ಯದಲ್ಲಿ ಅಜೇಯ ಆಟವಾಡಿದ ಯಾದವ್‌ ಕೇವಲ 43 ಎಸೆತಗಳಲ್ಲಿ ಅಜೇಯ 79 ರನ್‌ ಗಳಿಸಿ ತಮ್ಮ ತಂಡಕ್ಕೆ ನಿರಾಯಾಸವಾಗಿ ಗೆಲುವು ತಂದುಕೊಟ್ಟರು.
Last Updated 2 ನವೆಂಬರ್ 2020, 12:22 IST
‘ಈ ಕಾರಣಕ್ಕಾಗಿ ನಾನು ಆತನನ್ನು ವಿರೋಧಿಸುವೆ’: ವಿರಾಟ್ ವಿರುದ್ಧ ನೆಟ್ಟಿಗರ ಕಿಡಿ

ಭಾರತದ ಕ್ರೀಡಾಸ್ಫೂರ್ತಿ ಪ್ರಶ್ನಿಸಿದ ವಕಾರ್

ವಿಶ್ವಕಪ್‌ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಸೋತಿರುವ ಭಾರತ ತಂಡದ ಕ್ರೀಡಾಸ್ಫೂರ್ತಿಯನ್ನು ಪಾಕಿಸ್ತಾನ ತಂಡದ ಮಾಜಿ ನಾಯಕ ವಕಾರ್‌ ಯೂನಸ್‌ ಪ್ರಶ್ನಿಸಿದ್ದಾರೆ. ಬರ್ಮಿಂಗಂನಲ್ಲಿ ಭಾನುವಾರ ಆತಿಥೇಯ ದೇಶ ಗೆದ್ದ ಕಾರಣ ಈಗ ಪಾಕಿಸ್ತಾನ ತಂಡದ ಸೆಮಿಫೈನಲ್‌ ಸಾಧ್ಯತೆ ತೂಗುಯ್ಯಾಲೆಯಲ್ಲಿದೆ.
Last Updated 1 ಜುಲೈ 2019, 20:01 IST
ಭಾರತದ ಕ್ರೀಡಾಸ್ಫೂರ್ತಿ ಪ್ರಶ್ನಿಸಿದ ವಕಾರ್
ADVERTISEMENT
ADVERTISEMENT
ADVERTISEMENT
ADVERTISEMENT