ತೈಲ ಟ್ಯಾಂಕರ್‌ ಸ್ಫೋಟಕ್ಕೆ 58 ಬಲಿ

ಶನಿವಾರ, ಮೇ 25, 2019
27 °C

ತೈಲ ಟ್ಯಾಂಕರ್‌ ಸ್ಫೋಟಕ್ಕೆ 58 ಬಲಿ

Published:
Updated:
Prajavani

ನಿಮೆಯಿ: ನೈಗರ್‌ ರಾಜಧಾನಿ ನಿಮೆಯಿಯಲ್ಲಿ ಉರುಳಿಬಿದ್ದ ತೈಲ ಟ್ಯಾಂಕರ್‌ನಿಂದ ತೈಲ ಸಂಗ್ರಹಿಸುತ್ತಿದ್ದ  58 ಜನ ದುರ್ಮರಣಕ್ಕೀಡಾಗಿದ್ದಾರೆ. ತೈಲ ಸಂಗ್ರಹಿಸಿಕೊಳ್ಳುತ್ತಿದ್ದ ಟ್ಯಾಂಕರ್‌ ಸ್ಫೋಟಗೊಂಡಿದ್ದರಿಂದ ಜನ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ನಿಮೆಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಆರ್‌ಎನ್‌ 1 ಮಾರ್ಗದಲ್ಲಿ ಈ ಸ್ಫೋಟ ನಡೆದಿದೆ.  ಘಟನೆಯಲ್ಲಿ 36 ಜನಕ್ಕೆ ಗಾಯಗಳಾಗಿವೆ. ಸ್ಫೋಟದ ತೀವ್ರತೆಗೆ ರಸ್ತೆಯಲ್ಲಿದ್ದ  ಬೈಕ್‌ಗಳು ಸುಟ್ಟು ಕರಕಲಾಗಿವೆ. ಸುತ್ತಮುತ್ತಲಿದ್ದ ಮನೆಗಳಿಗೂ ಹಾನಿಯಾಗಿದೆ ಎಂದು ಒಳಾಡಳಿತ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದ್ದಾರೆ.

ತೈಲ ಉತ್ಪಾದನೆ ಹೆಚ್ಚಿರುವ ನೈಜೀರಿಯಾದಲ್ಲಿ, ಕೊಳವೆಗಳಿಂದ ತೈಲ ಕದಿಯುವ ಸಂದರ್ಭದಲ್ಲಿ ಇಂತಹ ಹಲವು ಪ್ರಾಣಹಾನಿ ಅವಘಡಗಳು ನಡೆದಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !