ವಿವಾಹಿತ ಗೆಳತಿಗೆ ಕಿರುಕುಳ; ಟೆಕಿ ಸೆರೆ

ಶನಿವಾರ, ಏಪ್ರಿಲ್ 20, 2019
32 °C

ವಿವಾಹಿತ ಗೆಳತಿಗೆ ಕಿರುಕುಳ; ಟೆಕಿ ಸೆರೆ

Published:
Updated:

ಬೆಂಗಳೂರು: ತನ್ನ ಕಾಲೇಜು ದಿನಗಳ ಸಹಪಾಠಿ ಗೆಳತಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಆರೋಪದಡಿ ಸಾಫ್ಟ್‌ವೇರ್ ಉದ್ಯೋಗಿ ಸಾಯನ್ (31) ಎಂಬಾತನನ್ನು ಬಂಧಿಸಿದ ಬಂಡೆಪಾಳ್ಯ ಪೊಲೀಸರು, ನಂತರ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.

ಕೋಲ್ಕತ್ತಾದ ಸಾಯನ್, ಪತ್ನಿ ಜತೆ ನಗರದ ಐಟಿಐ ಲೇಔಟ್‌ನಲ್ಲಿ ನೆಲೆಸಿದ್ದಾನೆ. ‘ಮೂರು ವರ್ಷಗಳ ಹಿಂದೆ ನಾನು ಮದುವೆಯಾಗಿ ಪತಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಈ ನಡುವೆ ಸಾಯನ್ ಪದೇ ಪದೇ ಕರೆ ಮಾಡಿ ತೊಂದರೆ ನೀಡುತ್ತಿದ್ದಾನೆ. ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾನೆ. ಕಾಲೇಜು ದಿನಗಳಲ್ಲಿ ಒಟ್ಟಿಗೇ ತೆಗೆಸಿಕೊಂಡಿದ್ದ ಫೋಟೊಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ತಿರುಚಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ’ ಎಂದು ಆರೋಪಿಸಿ ಆತನ ಗೆಳತಿ ಠಾಣೆಗೆ ದೂರು ಕೊಟ್ಟಿದ್ದರು.

‘ಇತ್ತೀಚೆಗೆ ನಾನು ಪತ್ನಿಯ ಜತೆ ಚೆನ್ನೈಗೆ ಹೋಗಿದ್ದಾಗ, ಒಂದೇ ದಿನ ಸಾಯನ್‌ನ ಮೊಬೈಲ್‌ನಿಂದ 47 ಮಿಸ್ಡ್‌ ಕಾಲ್‌ಗಳು ಬಂದಿದ್ದವು. ಇದರಿಂದ ಕಿರಿಕಿರಿಯಾಗಿ ಪೊಲೀಸರಿಗೆ ದೂರು ಕೊಡಲು ನಿರ್ಧರಿಸಿದ್ದೆ. ಬುಧವಾರವೂ 4 ಸಲ ಕರೆ ಮಾಡಿ ಕೆಟ್ಟದಾಗಿ ಮಾತನಾಡಿದ. ಈತನಿಂದಾಗಿ ನಮ್ಮ ದಾಂಪತ್ಯ ಜೀವನ ಹಾಳಾಗುತ್ತಿದೆ. ಹೀಗಾಗಿ, ಸಾಯನ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದರು. 

ಮಹಿಳೆಯನ್ನು ಹಿಂಬಾಲಿಸಿದ (ಐಪಿಸಿ 354ಡಿ) ಹಾಗೂ ಉದ್ದೇಶಪೂರ್ವಕವಾಗಿ ಶಾಂತಿ ಕದಡಿದ (504) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಸಾಯನ್‌ನನ್ನು ಗುರುವಾರ ಆತನ ಮನೆಯಿಂದಲೇ ಬಂಧಿಸಿದರು.

‘ನ್ಯಾಯಾಲಯ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣವನ್ನು ಕೋರಮಂಗಲ ಠಾಣೆಗೆ ವರ್ಗಾಯಿಸುತ್ತೇವೆ’ ಎಂದು ಬಂಡೆಪಾಳ್ಯ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !