ಶನಿವಾರ, ಅಕ್ಟೋಬರ್ 23, 2021
22 °C

ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದ ಹುಂಡೈ: ಬೆಲೆ ವಿವರ ಇಲ್ಲಿದೆ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Hyundai India

ಬೆಂಗಳೂರು: ಹುಂಡೈ ಎಲೆಕ್ಟ್ರಾನಿಕ್ಸ್ ದೇಶದ ಟಿವಿ ಮಾರುಕಟ್ಟೆಗೆ ಹೊಸ ಮಾದರಿಯ ಸ್ಮಾರ್ಟ್ ಎಲ್‌ಇಡಿ ಟಿವಿ ಬಿಡುಗಡೆ ಮಾಡಿದೆ.

43, 50 ಮತ್ತು 55 ಇಂಚಿನ ಡಿಸ್‌ಪ್ಲೇ ಹೊಂದಿರುವ ಮೂರು ಸ್ಮಾರ್ಟ್ ಟಿವಿ ಮಾದರಿಗಳನ್ನು ದೇಶದಲ್ಲಿ ಪರಿಚಯಿಸಿರುವ ಹುಂಡೈ ಹೆಚ್ಚಿನ ವೇಗದ ಕಾರ್ಯಾಚರಣೆ ಹೊಂದಿದೆ ಎಂದು ಕಂಪನಿ ಹೇಳಿದೆ.

ತಾಂತ್ರಿಕ ವೈಶಿಷ್ಟ್ಯ

ಹುಂಡೈ ಎಲೆಕ್ಟ್ರಾನಿಕ್ಸ್ ಪರಿಚಯಿಸಿರುವ ಮೂರು ಟಿವಿಗಳು ಕೂಡ 1.5 GB RAM, 8 GB ಮೆಮೊರಿ ಸ್ಟೋರೇಜ್ ಹೊಂದಿವೆ. ಜತೆಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಯೂಟ್ಯೂಬ್ ಸಹಿತ ಪ್ರಮುಖ ಒಟಿಟಿ ತಾಣಗಳನ್ನು ಕೂಡ ಹುಂಡೈ ಟಿವಿ ಹೊಂದಿದೆ.

ಬೆಲೆ ವಿವರ

ಹುಂಡೈ ಟಿವಿ 43 ಇಂಚಿನ ಮಾದರಿಗೆ ₹34,490 ಮತ್ತು 50 ಇಂಚಿನ ಆವೃತ್ತಿಗೆ ₹45,990 ಹಾಗೂ 55 ಇಂಚಿನ ಮಾದರಿಗೆ ₹52,990 ದರ ಹೊಂದಿದೆ.

ಹಬ್ಬದ ಸೀಸನ್‌ನಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ, ಹೊಸ ಮಾದರಿಯ ಟಿವಿಗಳನ್ನು ಕಂಪನಿಗಳು ದೇಶದಲ್ಲಿ ಬಿಡುಗಡೆ ಮಾಡುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು