ಭಾನುವಾರ, ಜುಲೈ 3, 2022
26 °C

Sony PlayStation 5: ದೇಶದಲ್ಲಿ ಪ್ರಿ ಆರ್ಡರ್‌ಗೆ ಲಭ್ಯವಾಗುತ್ತಿದೆ ಸೋನಿ ಪಿಎಸ್5

ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

Sony PS5

ಬೆಂಗಳೂರು: ಕೊನೆಗೂ ದೇಶದ ಮಾರುಕಟ್ಟೆಗೆ ಸೋನಿ ವಿನೂತನ ಪ್ಲೇಸ್ಟೇಶನ್ 5 ಲಗ್ಗೆ ಇರಿಸುತ್ತಿದೆ. ಬಹುನಿರೀಕ್ಷಿತ ಸೋನಿ ಪ್ಲೇಸ್ಟೇಶನ್ 5 ಪ್ರಿಆರ್ಡರ್ ಮಂಗಳವಾರ ಜ. 12ರಂದು ಆರಂಭವಾಗಿದೆ. ಸೋನಿ ಮತ್ತು ರಿಟೇಲ್ ಪಾರ್ಟನರ್ ಸ್ಟೋರ್ ಮೂಲಕ ಗ್ರಾಹಕರು ಪ್ರಿ ಬುಕಿಂಗ್ ಮಾಡಬಹುದು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸೋನಿ ಜಾಗತಿಕ ಮಾರುಕಟ್ಟೆಗೆ ಹೊಸ ಸರಣಿಯ ಪ್ಲೇಸ್ಟೇಶನ್ 5 ಪರಿಚಯಿಸಿತ್ತು. ಪ್ರಸ್ತುತ ಸೋನಿ ಪಿಎಸ್5 ಅನ್ನು  ಅಮೆಜಾನ್, ಫ್ಲಿಪ್‌ಕಾರ್ಟ್, ಕ್ರೋಮಾ, ರಿಲಯನ್ಸ್ ಡಿಜಿಟಲ್, ಸೋನಿ ಸೆಂಟರ್ ಸಹಿತ ಪ್ರಮುಖ ರಿಟೇಲ್ ಸ್ಟೋರ್ ಮೂಲಕ ಪ್ರಿ ಆರ್ಡರ್ ಮಾಡಬಹುದು.

ಬೆಲೆ ಎಷ್ಟಿದೆ?

ಹೊಸ ಸೋನಿ ಪಿಎಸ್5 ದರ ದೇಶದಲ್ಲಿ ₹49,990 ಇದೆ. ಅಲ್ಲದೆ, ಎಚ್‌ಡಿಎಫ್‌ಸಿ, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಮತ್ತು ಎಸ್‌ಬಿಐ ಕಾರ್ಡ್ ಬಳಸಿ ₹8,332 ಆರಂಭಿಕ ಇಎಂಐ ಆಯ್ಕೆ ಮೂಲಕ ಖರೀದಿಸಬಹುದು. ಜತೆಗೆ ಸೋನಿ ಡ್ಯುಯಲ್‌ಸೆನ್ಸ್ ವೈರ್‌ಲೆಸ್ ಕಂಟ್ರೋಲರ್ ಅನ್ನು ₹5,990 ಮತ್ತು ಮೀಡಿಯಾ ರಿಮೋಟ್ ಅನ್ನು ₹2,590 ದರಕ್ಕೆ ಖರೀದಿಸಬಹುದು.

ಇದನ್ನೂ ಓದಿ: 

ಹೊಸ ಸೋನಿ ಪಿಎಸ್5, 4K ಗ್ರಾಫಿಕ್ಸ್, ಎಸ್‌ಎಸ್‌ಡಿ ಸ್ಟೋರೇಜ್, ಹೈ ಫಿಡೆಲಿಟಿ ವಿಶ್ಯುವಲ್ಸ್ ಸಹಿತ ವಿವಿಧ ಆಕರ್ಷಕ ಫೀಚರ್ಸ್ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು