ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್‌ನಿಂದ ರೊಟೇಟ್ ಮಾಡಬಲ್ಲ ಟಿವಿ ‘ದಿ ಸೆರೊ’ ಬಿಡುಗಡೆ

Last Updated 17 ನವೆಂಬರ್ 2020, 7:51 IST
ಅಕ್ಷರ ಗಾತ್ರ
ADVERTISEMENT
""
""

ಗುರುಗ್ರಾಮ: ಸಾಮಾಜಿಕ ಮಾಧ್ಯಮ ಬಳಕೆದಾರರು ಹಾಗೂ ಯುವ ಗ್ರಾಹಕರನ್ನು ಆದ್ಯತೆಯಾಗಿಟ್ಟುಕೊಂಡು ಸ್ಯಾಮ್‌ಸಂಗ್ ಕಂಪನಿಯು ಸ್ಮಾರ್ಟ್‌ಫೋನ್ ಮಾದರಿಯ ಹೊಸ ಟಿವಿ ‘ದಿ ಸೆರೊ’ ಬಿಡುಗಡೆ ಮಾಡಿದೆ.

‘ವರ್ಟಿಕಲ್ ಮತ್ತು ಹಾರಿಜಾಂಟಲ್ (ಉದ್ದಕೆ ಹಾಗೂ ಅಡ್ಡಲಾಗಿ ತಿರುಗಿಸಬಲ್ಲ) ಆಗಿ ಬಳಸಬಲ್ಲ ಇದು ವಿಶ್ವದ ಮೊದಲ ಮೊಬೈಲ್‌ ಆಪ್ಟಿಮೈಜ್ಡ್ ಟಿವಿ. ಯಾವುದೇ ರೀತಿಯ ವಿನ್ಯಾಸ ಹೊಂದಿರುವ ಕೊಠಡಿಗೂ ಹೊಂದಿಕೆಯಾಗುವಂತೆ ನೇವಿ ಬ್ಲೂ ಸ್ಟ್ಯಾಂಡ್‌ನೊಂದಿಗೆ 360 ಡಿಗ್ರಿ ಕೋನದಲ್ಲಿ ಟಿವಿಯನ್ನು ವಿನ್ಯಾಸಗೊಳಿಸಲಾಗಿದೆ’ ಎಂದು ಕಂಪನಿ ಹೇಳಿದೆ.

ಸಾಮಾಜಿಕ ಮಾಧ್ಯಮಗಳ ಸಂದೇಶಗಳನ್ನು ನೋಡಲು, ಸ್ಟ್ರೀಮಿಂಗ್‌ಗಳನ್ನು ವೀಕ್ಷಿಸಲು ಅನುವಾಗುವಂತೆ ಟಿವಿ ಅಭಿವೃದ್ಧಿಪಡಿಸಲಾಗಿದೆ. ಟಿವಿಯು ಅಟೊಮ್ಯಾಟಿಕ್ ರೊಟೇಟ್ ಆಗುವ ಸಾಮರ್ಥ್ಯ ಹೊಂದಿದ್ದು ರಿಮೋಟ್, ‘ಸ್ಮಾರ್ಟ್‌ಥಿಂಗ್ಸ್‌ ಆ್ಯಪ್’ ಮೂಲಕ ವಾಯ್ಸ್‌ ಕಮಾಂಡ್‌ ನೀಡಿಯೂ ನಿಯಂತ್ರಿಸಬಹುದು.

ವಿಶೇಷಗಳು...

* 43 ಇಂಚು ಗಾತ್ರದ ಸ್ಕ್ರೀನ್

* 4.1ಸಿಎಚ್‌ 60 ಡಬ್ಲ್ಯು ಫ್ರಂಟ್‌ ಫೈರಿಂಗ್ ಸ್ಪೀಕರ್‌ಗಳು, ಬ್ಲುಟೂಥ್ ಕನೆಕ್ಷನ್‌ ಮೂಲಕ ಸ್ಮಾರ್ಟ್‌ಫೋನ್‌ ಕನೆಕ್ಟ್ ಮಾಡುವ ಅವಕಾಶ.

* ‘ಒನ್ ಟ್ಯಾಪ್ ಕಂಟೆಂಟ್ ಶೇರಿಂಗ್’ ಆಯ್ಕೆ ಮೂಲಕ ಸ್ಮಾರ್ಟ್‌ಫೋನ್‌ ಆ್ಯಪ್‌ಗಳು, ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಟಿವಿಯಲ್ಲಿ ನೋಡಬಹುದು

* ಕ್ಯೂಎಲ್‌ಇಡಿ ತಂತ್ರಜ್ಞಾನ ಆಧಾರಿತ ಡಿಸ್‌ಪ್ಲೇ

* 4ಕೆ ರೆಸಲ್ಯೂಷನ್

* ಅಡಾಪ್ಟಿವ್ ಪಿಕ್ಚರ್, ರೆಸ್ಪಾನ್ಸಿವ್ ಯುಐ, ಟ್ಯಾಪ್ ವಿವ್ ಟೆಕ್ನಾಲಜಿ, ಆ್ಯಕ್ಟಿವ್ ವಾಯ್ಸ್ ಆ್ಯಂಪ್ಲಿಫಯರ್ (ಎವಿಎ) ಸೇರಿದಂತೆ ಸ್ಮಾರ್ಟ್‌ ಫೀಚರ್‌ಗಳು

ಎಲ್ಲಿ ಲಭ್ಯ?

‘ದಿ ಸೆರೊ’ ಟಿವಿ ರಿಲಯನ್ಸ್‌ ಡಿಜಿಟಲ್‌ ಸ್ಟೋರ್‌ಗಳಲ್ಲಿ ಲಭ್ಯವಿದೆ.

ಬೆಲೆ ಎಷ್ಟು?‌

‘ದಿ ಸೆರೊ’ ಟಿವಿ ಬೆಲೆ ₹1,24,990 ಆಗಿದ್ದು, ಶೇ 5 ಕ್ಯಾಶ್‌ಬ್ಯಾಕ್, ₹1,190ರ ವರೆಗಿನ ಇಎಂಐ ಆಯ್ಕೆ ಒಳಗೊಂಡಿದೆ. 10 ವರ್ಷಗಳವರೆಗೆ ‘ನೊ ಸ್ಕ್ರೀನ್‌ ಬರ್ನ್ ಇನ್ ವಾರಂಟಿ’ ಹಾಗೂ ಪ್ಯಾನೆಲ್‌ಗೆ ಒಂದು ವರ್ಷ ಹೆಚ್ಚುವರಿ ವಾರಂಟಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT