ನವದೆಹಲಿ: 32 ಇಂಚಿನ ಆಲ್ಫಾ ಸರಣಿ ಸ್ಮಾರ್ಟ್ ಟಿವಿಯನ್ನು ಥಾಮ್ಸನ್ ಬಿಡುಗಡೆ ಮಾಡಿದೆ. ಬೆಲೆ ₹ 9,999 ಇದೆ. ಜೂನ್ 26ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ.
ನೂತನ ಎಚ್‌ಡಿ ಸ್ಮಾರ್ಟ್ ಟಿವಿಯಲ್ಲಿ ಯುಟ್ಯೂಬ್, ಅಮೆಜಾನ್ ಪ್ರೈಂ ವಿಡಿಯೊ, ಸೋನಿ ಲೈವ್, ಜೀ5, ಎರೋಸ್ ನೌ ಇತ್ಯಾದಿ ಇನ್‌ಬಿಲ್ಟ್ ಇದೆ. ಉತ್ತಮ ಸೌಂಡ್ ವ್ಯವಸ್ಥೆ ಇದೆ.
30w ಸ್ಪೀಕರ್, 512 ಎಂಬಿ ರಾಮ್, 4 ಜಿಬಿ ರೋಮ್, ಮಿರಾಕಾಸ್ಟ್, ವೈ-ಫೈ, ಎಡಿಎಂಐ, ಯುಎಸ್‌ಬಿ ಸಂಪರ್ಕ ವ್ಯವಸ್ಥೆಗಳು ಸೇರಿದಂತೆ ಇತರೆ ಬಳಕೆದಾರ ಸ್ನೇಹಿ ವ್ಯವಸ್ಥೆಗಳಿವೆ.
2018ರಲ್ಲಿ ಭಾರತೀಯ ಮಾರುಕಟ್ಟೆ ಮರು ಪ್ರವೇಶ ಮಾಡಿರುವ ಥಾಮ್ಸನ್ ಸ್ಮಾರ್ಟ್ ಟಿವಿ ಸರಣಿ ತರುತ್ತಿದೆ. ರಿಯಾಯಿತಿ ಬೆಲೆಯಲ್ಲಿ ಉತ್ತಮ ತಂತ್ರಜ್ಞಾನವನ್ನು ಒಳಗೊಂಡ ಸ್ಮಾರ್ಟ್ ಟಿವಿಗಳನ್ನು ಒದಗಿಸುತ್ತಿದೆ.
ನೂತನ ಆಲ್ಫಾ 32 ಸ್ಮಾರ್ಟ್ ಟಿವಿ ಬಿಡುಗಡೆಗೊಂಡಿರುವುದು ಸಂತಸದ ವಿಚಾರ. ಬಳಕೆದಾರರು ಡಿಜಿಟಲ್ ಇಂಡಿಯಾದ ಭಾಗವಾಗಬೇಕು ಎಂಬ ಅಭಿಲಾಷೆ ನಮ್ಮದು. ಹಾಗಾಗಿ ಕಡಿಮೆ ದರದಲ್ಲಿ ಸುಸಜ್ಜಿತ ಸ್ಮಾರ್ಟ್ ಟಿವಿಯನ್ನು ನೀಡುತ್ತಿದ್ದೇವೆ. 2022ರಲ್ಲಿ ಬಿಡುಗಡೆಯಾಗುತ್ತಿರುವ ಥಾಮ್ಸನ್‌ನ 3ನೇ ಹೊಸ ಪ್ರಾಡಕ್ಟ್ ಇದಾಗಿದೆ ಎಂದು ಭಾರತದ ಥಾಮ್ಸನ್ ಕಂಪನಿಯ ಮುಖ್ಯಸ್ಥ ಅವನೀತ್ ಸಿಂಗ್ ಮರ್ವ ತಿಳಿಸಿದ್ದಾರೆ.
ಈ ಟಿವಿಯನ್ನು ಖರೀದಿಸುವ ಗ್ರಾಹಕರಿಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳಿಗೆ ಶೇಕಡಾ 10ರಷ್ಟು ರಿಯಾಯಿತಿ ಸಿಗಲಿದೆ. ಉಚಿತ ಗಾನಾ ಪ್ಲಸ್ ಸಬ್‌ಸ್ಕ್ರಿಪ್ಶನ್ ಸೇರಿದಂತೆ ಮತ್ತಿತರ ಸೌಲಭ್ಯಗಳು ಸಿಗಲಿವೆ.