ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Thomson TV: ಮಾರುಕಟ್ಟೆಗೆ ಲಗ್ಗೆಯಿಟ್ಟ ಥಾಮ್ಸನ್‌ PATH ಶ್ರೇಣಿಯ ಟಿ.ವಿ

Last Updated 1 ಅಕ್ಟೋಬರ್ 2021, 14:24 IST
ಅಕ್ಷರ ಗಾತ್ರ

ನವದೆಹಲಿ: ಥಾಮ್ಸನ್ ಇಂಡಿಯಾ ಸಂಸ್ಥೆಯು PATH ಶ್ರೇಣಿಯಲ್ಲಿ (9ಆರ್ ಪ್ರೊ) ಮೂರು ನೂತನ ಟಿ.ವಿ ಬಿಡುಗಡೆಗೊಳಿಸಿದೆ. ಇದು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ವಿಶೇಷ ರಿಯಾಯಿತಿಯೊಂದಿಗೆ ಲಭ್ಯವಾಗಲಿದೆ.

ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಥಾಮ್ಸನ್ PATH ಶ್ರೇಣಿಯ ಟಿ.ವಿಗಳು 43 ಇಂಚು, 50 ಇಂಚು ಹಾಗೂ 55 ಇಂಚುಗಳಲ್ಲಿ ಲಭ್ಯವಿರಲಿವೆ.

ಎಲ್ಲ ಮೂರು ಮಾದರಿಗಳು ಅಲ್ಟ್ರಾ-ಹೈ ಡೆಫಿನಿಷನ್ ವಿಡಿಯೊ ಗುಣಮಟ್ಟ, HDR10+ ಇತ್ಯಾದಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರಲಿವೆ.

ಬೆಲೆ ಮಾಹಿತಿ:

9ಆರ್ ಪ್ರೊ (43PATH4545BL): ₹23,999
9ಆರ್ ಪ್ರೊ (50PATH1010BL): ₹31,999
9ಆರ್ ಪ್ರೊ (55PATH5050BL): ₹34,999

ಇದೇ ಸಂದರ್ಭದಲ್ಲಿ ಅತಿ ನೂತನ 8.5 ಕೆ.ಜಿ. ಸಾಮರ್ಥ್ಯದ ಸಂಪೂರ್ಣ ಆಟೋಮ್ಯಾಟಿಕ್ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ ₹23,499 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT